ಉಡುಪಿ: ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿಗ್ಗಜ ಸಾಫ್ಟ್ ವೇರ್ ಕಂಪನಿ ರೋಬೋಸಾಫ್ಟ್ ಜಪಾನ್ ಮೂಲದ ಟೆಕ್ನೋ ಪ್ರೊ ಸಂಸ್ಥೆಯ ತೆಕ್ಕೆಗೆ ಹೋಗಿದೆ. ಈಗಾಗಲೇ ಮಾರಾಟ ಒಪ್ಪಂದ ಮುಗಿದಿದ್ದು ಸುಮಾರು 80 ಶೇಕಡ ಶೇರನ್ನು ಜಪಾನ್ ಮೂಲದ ಟೆಕ್ನೋ ಪ್ರೋ ಖರೀದಿಸಿದೆ.
ಮಾರಾಟ ಪ್ರಕ್ರಿಯೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿರುವ ರೋಬೋ ಸಾಫ್ಟ್ ಸ್ಥಾಪಕರಾದ ರೋಹಿತ್ ಭಟ್, ನಮ್ಮ ಸಂಸ್ಥೆಯನ್ನು ಜಪಾನ್ ಮೂಲದ ಸಾಫ್ಟ್ ವೇರ್ ಕಂಪನಿ ಟೆಕ್ನೋ ಪ್ರೊ ಖರೀದಿ ಮಾಡಿದರೂ ಕೂಡ ರೋಬೋಸಾಫ್ಟ್ ಹೆಸರಿನಲ್ಲೇ ಕಾರ್ಯಾಚರಿಸಲಿದ್ದು ಲೆಗಸಿ ಇದೇ ರೀತಿ ಮುಂದುವರೆಯಲಿದೆ. ಈಗಾಗಲೇ ನಮ್ಮ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ ಈ ಪೈಕಿ ಬಹುತೇಕರು ಸ್ಥಳೀಯರು. ಬಹಳ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ನಮ್ಮ ಯುವಕ ಯುವತಿಯರು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಮುಂದೆಯೂ ಕೂಡ ಅವರು ಇಲ್ಲೇ ಮುಂದುವರಿಯಲಿದ್ದಾರೆ ಜೊತೆಗೆ ಇನ್ನಷ್ಟು ಉದ್ಯೋಗವಕಾಶ ಹೆಚ್ಚಲಿದೆ. ಜಪಾನ್ ನ ಟೆಕ್ನೋ ಪ್ರೊ ಸಂಸ್ಥೆಯಲ್ಲಿ 21 ಸಾವಿರದಷ್ಟು ಉದ್ಯೋಗಿಗಳಿದ್ದಾರೆ.ಈ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಅವರದು. ಇನ್ನೊಂದು ವರ್ಷದಲ್ಲಿ ಉಳಿದ ಇಪ್ಪತ್ತು ಶೇಕಡ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ರೋಹಿತ್ ಭಟ್ ಹೇಳಿದ್ದಾರೆ.
PublicNext
14/08/2021 09:39 am