ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ಟಿಕ್​ ಟಾಕ್ ಕಂಬ್ಯಾಕ್?

ಭಾರತದಲ್ಲಿ ಟಿಕ್‌ ಟಾಕ್ ಬ್ಯಾನ್ ಕೆಲವರಿಗೆ ಸಂತೋಷ ನೀಡಿದರೆ ಇನ್ನೂ ಕೆಲವರನ್ನು ದುಃಖದ ಕಡಲಿನಲ್ಲಿ ಮುಳುಗುವಂತೆ ಮಾಡಿದೆ. ಆದರೆ ಈಗ ಟಿಕ್‌ ಟಾಕ್ ಹೊಸ ರೂಪ ಪಡೆದು ಭಾರತಕ್ಕೆ ಕಂಬ್ಯಾಕ್ ಬರಲಿದೆ ಎಂಬ ಗಾಳಿಸುದ್ದಿಗಳು ಕೂಡ ಹರಿದಾಡುತ್ತಿವೆ.

ಹೌದು.. ಬೆಂಗಳೂರು ಮೂಲದ ಗ್ಲಾನ್ಸ್ ಡಿಜಿಟಲ್ ಸಂಸ್ಥೆ ಟಿಕ್ ಟಾಕ್ ಖರೀದಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ವರದಿಯ ಪ್ರಕಾರ, ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಗ್ರೂಪ್‌ ಮಾತುಕತೆ ಆರಂಭಿಸಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ‘ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌’ನ ಮಾತೃ ಸಂಸ್ಥೆ 'ಇನ್‌ಮೊಬಿ’ ಮತ್ತು ‘ಬೈಟ್‌ಡ್ಯಾನ್ಸ್‌’ ಎರಡರಲ್ಲೂ ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಹೂಡಿಕೆ ಮಾಡಿದೆ. ಈ ಹಿನ್ನೆಲೆ ಸಾಫ್ಟ್‌ ಬ್ಯಾಂಕ್‌ ಮಾತುಕತೆಗೆ ಒಂದು ಉತ್ತಮ ವೇದಿಕೆ ಒದಗಿಸಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

15/02/2021 06:26 pm

Cinque Terre

37.45 K

Cinque Terre

0

ಸಂಬಂಧಿತ ಸುದ್ದಿ