ನವದೆಹಲಿ: ಮೆಸೇಜಿಂಗ್ ಸೇವೆ ಟೆಲಿಗ್ರಾಂ ಜಾಗತಿಕವಾಗಿ 500 ಮಿಲಿಯನ್ ಚಂದಾದಾರರನ್ನು ದಾಟಿದ್ದು, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಾಟ್ಸಪ್ನ ಗೌಪ್ಯತೆ ನೀತಿ ನವೀಕರಣದ ವಿವಾದದ ಮಧ್ಯೆ ಟೆಲಿಗ್ರಾಂಗೆ 25 ಮಿಲಿಯನ್ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ.
ಟೆಲಿಗ್ರಾಂ, ಭಾರತೀಯ ನಿರ್ದಿಷ್ಟ ಬಳಕೆದಾರರ ಸಂಖ್ಯೆ ನಿರ್ದಿಷ್ಟಪಡಿಸದಿದ್ದರೂ ಹೊಸ ಬಳಕೆದಾರರಲ್ಲಿ 38 ಪ್ರತಿಶತದಷ್ಟು ಜನರು ಏಷ್ಯಾದವರಾಗಿದ್ದಾರೆ. ಯುರೋಪ್ (ಶೇ 27ರಷ್ಟು), ಲ್ಯಾಟಿನ್ ಅಮೆರಿಕ (ಶೇ 21ರಷ್ಟು) ಮತ್ತು ಮೆನಾ (ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಶೇ 8ರಷ್ಟು).
ಜನವರಿ ಮೊದಲ ವಾರದಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಮೀರಿದೆ. ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರು ಟೆಲಿಗ್ರಾಂಗೆ ಸೇರ್ಪಡೆಗೊಂಡಿದ್ದಾರೆ. ಸೆನ್ಸಾರ್ ಟವರ್ ಡೇಟಾ ಉಲ್ಲೇಖಿಸಿದ ವರದಿಗಳು, ಭಾರತದಲ್ಲಿ ಜನವರಿ 6-10ರ ನಡುವೆ ಟೆಲಿಗ್ರಾಮ್ 1.5 ಮಿಲಿಯನ್ ಹೊಸ ಡೌನ್‌ಲೋಡ್ ಹೊಂದಿದೆ ಎಂದಿವೆ.
PublicNext
14/01/2021 07:34 am