ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Google Pay ಗೂ ಇನ್ಮುಂದೆ ಚಾರ್ಜ್

ನವದೆಹಲಿ : ಅತ್ಯಂತ ಅನುಕೂಲಕರವಾಗಿದ್ದ ಹಾಗೂ ಜನಪ್ರಿಯ ಹಣ ಪಾವತಿ ಅಪ್ಲಿಕೇಶನ್ ಗೂಗಲ್ ಪೇ ಗೂ ಇನ್ಮುಂದೆ ಶುಲ್ಕ ಕಟ್ಟಬೇಕಾಗುತ್ತದೆ.

2021ರಿಂದ ಶುಲ್ಕ ವಿಧಿಸುವ ಕಾರ್ಯ ನಡೆಯಲಿದೆ. ಮುಂದಿನ ವರ್ಷ ಜನವರಿಯಿಂದ ವೆಬ್ ಅಪ್ಲಿಕೇಶನ್ ಸೈಟ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ಬಳಕೆದಾರರಿಗೆ ಗೂಗಲ್ ನೋಟಿಸ್ ನೀಡಿದೆ.

ಒಂದರಿಂದ ಸಾವಿರಾರು ರೂಪಾಯಿಗಳವರೆಗೆ ಕುಳಿತಲ್ಲಿಂದಲ್ಲೇ ಕ್ಷಣಾರ್ಧದಲ್ಲಿ ಖರ್ಚಿಲ್ಲದೆ ಹಣ ಕಳುಹಿಸಲು ಮತ್ತು ಪಡೆಯಲು ಗೂಗಲ್ ಪೇ ತೀರಾ ಅನುಕೂಲವಾಗಿತ್ತು.

ಹೀಗೆ ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ!

ಹೌದು.. ಸದ್ಯದಲ್ಲೇ ಗೂಗಲ್ ಪೇ ಮೂಲಕ ಹಣ ಕಳುಹಿಸುವುದಕ್ಕೂ ಶುಲ್ಕ ಪಡೆಯಲಾಗುತ್ತದೆ. ಮುಂದೆ ಹಣ ಕಳುಹಿಸುವುದಕ್ಕೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ಗೂಗಲ್ ಪೇ ಸ್ಪಷ್ಟವಾಗಿ ಹೇಳದಿದ್ದರೂ, ಗೂಗಲ್ ಪೇ ವ್ಯವಸ್ಥೆ ಮುಂದೆ ಉಚಿತವಾಗಿ ಲಭಿಸುವುದಿಲ್ಲ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿದೆ.

ಅಮೆರಿಕದ ಬಳಕೆದಾರರಿಗೆ ಸಾಕಷ್ಟು ಹೊಸ ಫೀಚರ್ಸ್ ಒದಗಿಸಿರುವ ಗೂಗಲ್ ಪೇ ಅಲ್ಲಿನ ತನ್ನ ಲೋಗೋ ಕೂಡ ಬದಲಿಸಿದೆ.

2021ರ ಜನವರಿಯಿಂದ ಗೂಗಲ್ ಪೇ ಸದ್ಯದ ಹಣ ವರ್ಗಾವಣೆ ವ್ಯವಸ್ಥೆ ಸ್ಥಗಿತಗೊಳಿಸಲಿದ್ದು, ಬದಲಿಗೆ ಇನ್ ಸ್ಟಂಟ್ ಮನಿ ಟ್ರಾನ್ಸ್ ಫರ್ ಸಿಸ್ಟಮ್ ಅಳವಡಿಸಲಿದೆ.

ಆ ಬಳಿಕ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

26/11/2020 09:37 pm

Cinque Terre

87.38 K

Cinque Terre

6