ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಬ್ಬಕ್ಕೆ ಭರ್ಜರಿ ಆಫರ್ಸ್‌; ಎಲೆಕ್ಟ್ರಾನಿಕ್ಸ್‌ ವಸ್ತುಗಳು, ದೈನಂದಿನ ಬಳಕೆ ಕೆಲ ವಸ್ತುಗಳ ಭಾರಿ ಇಳಿಕೆ

ಕೋಲ್ಕತ್ತ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟೆಲಿವಿಷನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ರೆಡಿಮೇಡ್‌ ಡ್ರೆಸ್‌ಗಳು ಮತ್ತು ದೈನಂದಿನ ಬಳಕೆಯ ಕೆಲವು ವಸ್ತುಗಳ ದರಗಳನ್ನು ಕಂಪನಿಗಳು ಕಡಿಮೆ ಮಾಡಿವೆ. ವಿಶೇಷ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುವುದು ಕಂಪನಿಗಳ ಉದ್ದೇಶ.

ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನೆಗೆ ಬಳಕೆಯಾಗುವ ಸೆಮಿಕಂಡಕ್ಟರ್‌, ಓಪನ್‌ ಸೆಲ್‌ ಸೇರಿದಂತೆ ಉಪ ವಸ್ತುಗಳ ದರಗಳು ಶೇ. 80ರಷ್ಟು ಇಳಿಕೆಯಾಗಿವೆ. ಹೀಗಾಗಿ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ದರ ತುಸು ಕಡಿಮೆಯಾಗಿದೆ. ಇತ್ತ ತಾಳೆ ಸೇರಿದಂತೆ ಖಾದ್ಯ ತೈಲಗಳ ದರಗಳು ಶೇ. 15ರಿಂದ 25ರ ತನಕ ಕಡಿಮೆಯಾಗಿದೆ. ನಾನಾ ಕಂಪನಿಗಳ ಹಬ್ಬದ ಸೀಸನ್‌ನ ಮಾರಾಟದ ಪ್ರಚಾರ ಸದ್ಯದಲ್ಲಿಯೇ ಆರಂಭವಾಗಲಿದೆ.

Edited By : Abhishek Kamoji
PublicNext

PublicNext

23/08/2022 05:21 pm

Cinque Terre

23.38 K

Cinque Terre

2