ನವದೆಹಲಿ: ಬಿಜೆಪಿ ಪರದ ಧೋರಣೆ ವಿವಾದ ಸುಳಿಯಲ್ಲಿ ಸಿಲುಕಿದ್ದ ಫೇಸ್‌ಬುಕ್ ಇಂಡಿಯಾದ ಉನ್ನತ ಅಧಿಕಾರಿ ಅಂಕಿದಾಸ್ ಅವರು ತಮ್ಮ ಹುದ್ದೆ ತ್ಯಜಿಸಿದ್ದಾರೆ. ಈ ವಿಚಾರವನ್ನು ಫೇಸ್‌ಬುಕ್ ಸಂಸ್ಥೆ ಮಂಗಳವಾರ ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಫೇಸ್‌ಬುಕ್ ಸಂಸ್ಥೆಯು, 'ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಫೇಸ್‌ಬುಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥರಾಗಿದ್ದರು ಅಂಕಿದಾಸ್ ಅವರು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ವಹಿಸುವ ಉದ್ದೇಶ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹುದ್ದೆಯಿಂದ ನಿರ್ಗಮಿಸಲು ತೀರ್ಮಾನಿಸಿದ್ದಾರೆ' ಎಂದು ಮಾಹಿತಿ ನೀಡಿದೆ.
PublicNext
27/10/2020 08:24 pm