ವರದಿ: ರಹೀಂ ಉಜಿರೆ
ಉಡುಪಿ : ಮತ್ಸ್ಯಪ್ರಿಯರಿಗೆ ಇದು ಸಂತಸದ ಸುದ್ದಿ. ಇಷ್ಟು ದಿನ ಗಗನೆಕ್ಕೇರಿದ್ದ ತಾಜಾ ಮೀನಿನ ದರದಲ್ಲಿ ಭಾರೀ ಇಳಿಕೆಯಾಗಿದೆ. ವೆರೈಟಿ ವೆರೈಟಿ ಮೀನುಗಳು ಅಗ್ಗದ ದರದಲ್ಲಿ ಸಿಗುತ್ತಿವೆ...ಬನ್ನಿ ನಾವು ಉಡುಪಿ ಫಿಶ್ ಮಾರುಕಟ್ಟೆಯತ್ತ ಒಂದು ಸುತ್ತು ಹಾಕಿ ಬರೋಣ....
ಇಲ್ಲಿ ನೋಡಿ....ಕಣ್ಣು ಹಾಯಿಸಿದಷ್ಟೂ ಮೀನುಗಳದ್ದೇ ರಾಜ್ಯ....ತಾಜಾ ತಾಜಾ ಜೀವಂತ ಮೀನುಗಳು....ಅಂಜಲ್, ಮಾಂಜಿ, ಮದಿಮಾಲ್, ಡಿಸ್ಕೋ ...ಬಂಗುಡೆ...ಕೊಡ್ಡೈ ...ಹೀಗೆ ವೆರೈಟಿ ವೆರೈಟಿ ತಾಜಾ ಮೀನುಗಳು... ಆಹಾ ಈ ಮೀನುಗಳನ್ನು ನೋಡ್ತಿದ್ರೆನೇ ಇಷ್ಟು ಖುಷಿ ಆಗುತ್ತೆ...ಇನ್ನು ಮಸಾಲೆ ಬೆರೆಸಿದ್ರೆ ಹೇಗಿರಬೇಡ..ಹೌದು ಕರಾವಳಿಯಲ್ಲಿ ಮತ್ಸ್ಯ ಪ್ರಿಯರಿಗೆ ದಿನಾ ಮೀನು ಬೇಕು...ಮೂರು ಹೊತ್ತು ಇದ್ದರೂ ಆಗಬಹುದು...ಮೀನೂಟ ಉಳಿದ ಮಾಂಸದೂಟದಂತೆ ಬೋರ್ ಎನಿಸಲ್ಲ....ಬಿರುಬಿಸಿಲಲ್ಲಿ ಮೀನಿಗೆ ರೇಟ್ ಜಾಸ್ತಿ...ಮಳೆಗಾಲ ಕಳೆದು ಮೀನಿನ ಹೊಸ ಋತುವು ಪ್ರಾರಂಭವಾಗಿತ್ತೆ ನೋಡಿ? ಆಗ ಮೀನು ತಾಜಾ ಇರುವುದರ ಜೊತೆಗೇ ಅಗ್ಗದಲ್ಲೂ ಸಿಗುತ್ತದೆ...ಆಗಸ್ಟ್ ನಿಂದ ಇನ್ನು ನವೆಂಬರ್ ಡಿಸೆಂಬರ್ ತನಕ ಮೀನುಪ್ರಿಯರಿಗೆ ಸುಗ್ಗಿ ಕಾಲ.....
ಸದ್ಯ ಉಡುಪಿಯಲ್ಲಿ ಮತ್ಸ್ಯ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಫಿಶಿಂಗ್ ಚೆನ್ನಾಗಿ ನಡೆದು ಕಡಲಮಕ್ಕಳು ಸಂತಸಗೊಂಡಿದ್ದಾರೆ. ರಾಶಿ ರಾಶಿ ಮೀನು ಹೆಚ್ಚಾಗಿ ಸಿಗುವ ಕಾರಣ ಪೂರೈಕೆ ಹೆಚ್ಚಾಗಿ ದರದಲ್ಲಿ ಇಳಿಮುಖವಾಗಿದೆ. ಇನ್ನೊಂದೆಡೆ ಶಾಶ್ರಣ ಮಾಸ ಅಂತ ಕೆಲವರು ಮಾಂಸ ಸೇವನೆ ಮಾಡೋದಿಲ್ಲ, ಅಲ್ಲದೇ ಕೇರಳಕ್ಕೆ ಸದ್ಯ ಮೀನು ಸಾಗಾಟ ಆಗ್ತಾ ಇಲ್ಲ, ಹೀಗಾಗಿ ಸಹಜವಾಗಿಯೇ ಮೀನಿನ ದರದಲ್ಲಿ ಇಳಿಕೆಯಾಗಿದೆ.
ಕರಾವಳಿಯಲ್ಲಿ ಬಡವರ ಕೈಗೆಟುಕದ ಮೀನೆಂದರ ಅಂಜಲ್ ಮತ್ತು ಮಾಂಜಿ.ಈ ಮೀನಿಗೆ ಹಿಂದೆ ಕೆ.ಜಿ ಗೆ ಸಾವಿರದಷ್ಟಿತ್ತು. ಸದ್ಯ 400 450ಕ್ಕೆ ಸಿಗ್ತಾ ಇದ್ದು ಬಡವರೂ ಒಂದು ಹೊತ್ತಿಗೆ ತಿನ್ನಬಹುದು. ಉಳಿದಂತೆ ಬಂಗುಡೆ ,ಬೂತಾಯಿ ,ಮದಿಮಾಲ್ ಮುರು ಮೀನುಗಳು ಸಿಕ್ಕಾ ಪಟ್ಟೆ ಕಡಿಮೆಗೆ ಸಿಗ್ತಾ ಇದೆ. ಇದರಿಂದಾಗಿ ಮತ್ಸ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ.
PublicNext
07/09/2021 06:41 pm