ಮುಂಬೈ: ಸಮುದ್ರದಿಂದ ಘೋಲ್ ಫಿಶ್ ಹಿಡಿದು ತಂದ ಮೀನುಗಾರರ ತಂಡವೊಂದು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದೆ. ಒಮ್ಮಿಂದೊಮ್ಮೆಲೇ ಅವರಿಗೆ ಲಾಟರಿ ಹೊಡೆದಂತಾಗಿದೆ.
ಮಹಾರಾಷ್ಟ್ರದ ಪಾಲ್ಗಾರ್ ಮುರ್ಬೆಯ ಚಂದ್ರಕಾಂತ್ ತಾರೆ ಎನ್ನುವ ಮೀನುಗಾರ ಸದ್ಯ ಕೋಟ್ಯಾಧಿಪತಿಯಾಗಿದ್ದಾರೆ. ಇವರು ತಮ್ಮ 10 ಜನ ಸಿಬ್ಬಂದಿಯೊಂದಿಗೆ ಗುಜರಾತ್-ಮಹಾರಾಷ್ಟ್ರ ಸಮುದ್ರದಲ್ಲಿ 20ರಿಂದ 25 ನಾಟಿಕಲ್ ಮೈಲಿ ದೂರ ಹೋಗಿ ಅಪರೂಪದ 157 ಘೋಲ್ ಮೀನುಗಳನ್ನು ಹಿಡಿದಿದ್ದರು. 'ಸೀ ಗೋಲ್ಡ್' ಎಂದು ಕರೆಯಲಾಗುವ ಈ ಮೀನು ಹಿಡಿದ ಮೇಲೆ ಅವರ ಹಾಗೂ ಅವರ ತಂಡದ ಅದೃಷ್ಟ ಖುಲಾಯಿಸಿದೆ.
ಘೋಲ್ ಸಿಕ್ಕ ಮೇಲೆ ಅದರ ಸುದ್ದಿ ಎಲ್ಲೆಡೆ ಹಬ್ಬಿದ್ದು ಈ ಮೀನುಗಳು ಮಾರುಕಟ್ಟೆಗೆ ಬರುತ್ತಲೇ ವ್ಯಾಪಾರಿಗಳು ಕಾಯುತ್ತಿದ್ದರಂತೆ. ಬಿಡ್ ಮಾಡಿದಾಗ ಬರೋಬ್ಬರಿ ಒಂದು ಕೋಟಿ 33 ಲಕ್ಷಕ್ಕೆ ಈ ಮೀನುಗಳು ಮಾರಾಟವಾಗಿವೆ. ಇದರ ಅಂಗಗಳು ಔಷಧೀಯ ಗುಣ ಹೊಂದಿವೆ. ಹಾಗೂ ಇದರ ಹೃದಯ ವಿವಿಧ ಔಷಧ ತಯಾರಿಸುವ ಅಂಗವಾಗಿದೆ.
PublicNext
02/09/2021 11:00 am