ಇಂಗ್ಲೆಂಡ್ ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಕೃಷಿ ದಂಪತಿಗಳ ಬಗ್ಗೆ ಒಂಚೂರು ತಿಳಿಯೋಣ ಬನ್ನಿ. ಇಂಗ್ಲೆಂಡಿನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಪರಿಸರಾಸಕ್ತರ ಗಮನ ಸೆಳೆದಿದೆ.
ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ ಕುರ್ಚಿ ಗಿಡಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿದೆ. ಗಿಡಗಳ ಮೂಲಕ ಇಲ್ಲಿ 250 ಚೇರ್‍ಗಳು, 100 ಲ್ಯಾಂಪ್‍ಗಳು ಮತ್ತು 50 ಟೇಬಲ್‍ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.
2012ರಲ್ಲಿ ಈ ಜೋಡಿ ತಮ್ಮ ಯೋಜನೆಯನ್ನು ವಿಸ್ತರಿಸಿದರು. ಅದೇ ವರ್ಷ ಅಲೈಸ್ ಜೊತೆ ಗೋವಿನ್ ವಿವಾಹವಾಯಿತು. ಕುರ್ಚಿಯ ಮರಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಅಭಿಲಾಷೆ ಆರಂಭಿಕ ಅಡೆ ತಡೆ ಎದುರಾದವು. ಈ ಗಿಡಗಳನ್ನು ಹಸುಗಳು ಮತ್ತು ಮೊಲಗಳು ತಿಂದು ಹಾಕಿದವು. ಆದರೂ ಧೃತಿಗಡೆದ ದಂಪತಿ ಬೆಳವಣಿಗೆಯನ್ನು ಕುಂಠಿತ ಗೊಳಿಸದೆ ಮರವನ್ನು ಕುರ್ಚಿ ಆಕಾರದಲ್ಲಿ ಬೆಳೆಸಲು ಪರಿಣಾಮಕಾರಿ ಮಾರ್ಗ ಕಂಡುಕೊಂಡರು.
ಬೆಳೆಯುತ್ತಿರುವ ಮರದ ಕಾಂಡಗಳನ್ನು ಸರಿಯಾದ ದಿಕ್ಕಿನಲ್ಲಿ ಹಬ್ಬಿ ಕುರ್ಚಿಯ ಆಕಾರ ಬರುವಂತೆ ಮಾಡಿದರು. ರೆಂಬೆಗಳು ಒಂದಕ್ಕೊಂದು ಬೆಸೆದುಕೊಳ್ಳಲು ಕಸಿ ವಿಧಾನ ಅನುಸರಿಸಿದರು. ಇವರ ಈ ಎಲ್ಲ ಪರಿಶ್ರಮ ಫಲ ಕೊನೆ ಹಂತದಲ್ಲಿ ಕೈ ಹಿಡಿದಿದೆ. ಕುರ್ಚಿಗಳು 12,480 ಡಾಲರ್, ಲ್ಯಾಂಪ್‍ಗಳು 2,870 ಡಾಲರ್ ಹಾಗೂ ಮೇಜುಗಳು 15,600 ಡಾಲರ್ ಮೌಲ್ಯ ಹೊಂದಿವೆ.
PublicNext
14/01/2021 12:17 pm