ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಟ್ಲರ್ ವಾಚು ಹರಾಜು ಆಗಿದ್ದು ಎಷ್ಟು ಕೋಟಿಗೆ ಗೊತ್ತೇ ?

ಅಮೆರಿಕಾ: ಜರ್ಮನಿಯ ಅಡಾಲ್ಫ್ ಹಿಟ್ಲರ್ ಧರಿಸುತ್ತಿದ್ದ ವಾಚ್ ಈಗ ಹರಾಜ್ ಆಗಿದೆ. ಅಮೆರಿಕಾದ ಆಯೋಜಿಸಿದ್ದ ಹರಾಜಿನಲ್ಲಿ ಹಿಟ್ಲರ್ ವಾಚ್ ಬರೋಬ್ಬರಿ 8.7 ಕೋಟಿ ಹೋಗಿದೆ.

ಹಿಟ್ಲರ್ ವಾಚ್ ಖರೀದಿಸಿದವರ ಹೆಸರನ್ನ ಎಲ್ಲೂ ಬಹಿರಂಗ ಪಡಿಸಿಲ್ಲ. ಹಿಟ್ಲರ್ ಹುಟ್ಟುಹಬ್ಬದಂದು ಈ ಗೋಲ್ಡ್ ಆಂಡ್ರಿಯಾಸ್ ಹ್ಯುಬರ್ ವಾಚ್‌ ಅನ್ನ ಉಡುಗೊರೆಯಾಗಿ ನೀಡಲಾಗಿತ್ತು ಅಂತಲೇ ಹರಾಜು ಕಂಪೆನಿ ಹೇಳಿಕೊಂಡಿದೆ.

1933 ರಲ್ಲಿ ಹಿಟ್ಲರ್ ಉಡುಗೊರೆಯಾಗಿ ಪಡೆದ ಈ ವಾಚ್‌ ನಲ್ಲಿ ನಾಜಿ ಪಕ್ಷ ಚಿಹ್ನೆ ಇದೆ. AH ಎಂಬ ಅಕ್ಷರಗಳನ್ನ ಇದರಲ್ಲಿ ಕೆತ್ತಲಾಗಿದೆ.

Edited By :
PublicNext

PublicNext

31/07/2022 01:25 pm

Cinque Terre

56.91 K

Cinque Terre

0

ಸಂಬಂಧಿತ ಸುದ್ದಿ