ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ, ಪ್ರತೀ ಡಾಲರ್ ಗೆ 77.55ರೂ!: ಇದು ಹಣದುಬ್ಬರದ ಪರಿಣಾಮ

ಮುಂಬೈ: ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಪ್ರತೀ ಡಾಲರ್‌ಗೆ 77.55ರೂಗೆ ಮೌಲ್ಯ ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತ ಕಂಡಿದ್ದು, ಬರೊಬ್ಬರಿ 30 ಪೈಸೆ ಇಳಿಕೆ ದಾಖಲಿಸಿದೆ. ಆ ಮೂಲಕ ರೂಪಾಯಿ ಮೌಲ್ಯ ಪ್ರತೀ ಡಾಲರ್ ಎದುರು 77.55ಕ್ಕೆ ಕುಸಿತಗೊಂಡಿದೆ.

ಏಷ್ಯಾದ ಕರೆನ್ಸಿಗಳ ವ್ಯಾಪಕ ಕುಸಿತ ಮತ್ತು ದೇಶೀಯ ಇಕ್ವಿಟಿ ಮಾರುಕಟ್ಟೆಗಳಲ್ಲಿನ ನೀರಸ ಪ್ರವೃತ್ತಿಯ ನಡುವೆ ಅಮೆರಿಕ ಡಾಲರ್ ವಿರುದ್ಧ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಗುರುವಾರ 30 ಪೈಸೆಯಷ್ಟು ಕುಸಿದು 77.55 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆ ಮೂಲಕ ರೂಪಾಯಿ ಮೌಲ್ಯ ಈ ವಾರ ಎರಡನೇ ಬಾರಿಗೆ ದಾಖಲೆಯ ಕುಸಿತ ಕಂಡಿದೆ. ವಿದೇಶಿ ನಿಧಿಯ ಹೊರಹರಿವು ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಸಹ ದೇಶೀಯ ಘಟಕದ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

12/05/2022 06:11 pm

Cinque Terre

44.03 K

Cinque Terre

4