ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾದಲ್ಲಿ ವ್ಯವಹಾರ ಸ್ಥಗಿತಗೊಳಿಸಿದ ಐಬಿಎಂ

ವಾಷಿಂಗ್ಟನ್‌: ಉಕ್ರೇನ್‌ ಮತ್ತು ರಷ್ಯಾ ನಡುವಿನ ಸಂಘರ್ಷದ ಕಾರಣಗಳಿಂದಾಗಿ ತಂತ್ರಜ್ಞಾನ ವಲಯದ ಬಹುರಾಷ್ಟ್ರೀಯ ಕಂಪನಿ ಐಬಿಎಂ ರಷ್ಯಾದೊಂದಿಗೆ ತನ್ನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಐಬಿಎಂ ಕಂಪನಿಯ ಸಿಇಒ ಅರವಿಂದ್ ಕೃಷ್ಣ, 'ಉಕ್ರೇನ್‌ನಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಕಳೆದ ವಾರದಿಂದ ಹಲವರಿಂದ ಪ್ರತಿಕ್ರಿಯೆಗಳನ್ನು ಪಡೆದಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ನಾವು ರಷ್ಯಾದಲ್ಲಿ ನಮ್ಮ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದೇವೆ. ಆ ಭಾಗದಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಎಲ್ಲ ರೀತಿಯಲ್ಲೂ ಅಗತ್ಯ ಬೆಂಬಲ ನೀಡಿರುವುದರ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ' ಎಂದು ತಿಳಿಸಿದ್ದಾರೆ.

ಐಬಿಎಂ ಕಂಪನಿಯು ಜೆಕ್‌ ಮತ್ತು ಪೋಲೆಂಡ್‌ನ ಜನೋಪಕಾರಿ ಸಂಘಟನೆಗಳಿಗೆ 5,00,000 ಡಾಲರ್‌ ನೆರವು ನೀಡುತ್ತಿದೆ.

Edited By : Vijay Kumar
PublicNext

PublicNext

08/03/2022 09:43 am

Cinque Terre

39.08 K

Cinque Terre

0

ಸಂಬಂಧಿತ ಸುದ್ದಿ