ಬೀಜಿಂಗ್: ಚೀನಾದ ಅತಿದೊಡ್ಡ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಕಂಪನಿ 'ಎವರ್‌ಗ್ರ್ಯಾಂಡ್' ಈಗ ನಷ್ಟ ಹಾಗೂ ಸಾಲದ ಬಿಕ್ಕಟ್ಟಿಗೆ ಸಿಲುಕಿದೆ. ಕೇವಲ ನೀರಿನ ಬಾಟಲ್ ಮಾರಾಟದ ಮೂಲಕ ಬ್ಯುಸಿನೆಸ್ ಆರಂಭಿಸಿದ್ದ ಈ ಕಂಪನಿ ನಂತರ ಹಂದಿ ಸಾಕಾಣಿಕೆ ಶುರು ಮಾಡಿತ್ತು. ಆಮೇಲಾಮೇಲೆ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಉದ್ಯಮಕ್ಕೆ ಕೈ ಹಾಕಿದ ಕಂಪನಿ ಯಶಸ್ವಿಯೂ ಆಯಿತು. 'ಎವರ್‌ಗ್ರ್ಯಾಂಡ್' ಮನೆ ಎಂದರೆ ನಮ್ಮ ಸ್ವಂತ ಮನೆ ಎಂದು ಅಲ್ಲಿನ ಜನ ನಂಬಿದ್ದರು. ಸದ್ಯ ಚೀನಾದ 250 ನಗರಗಳಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ ಈಗ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಅದಕ್ಕೆ ಕಾರಣಗಳು ಹಲವಾರು.
ಎವರ್ಗ್ರ್ಯಾಂಡ್ನ ಇವತ್ತಿನ ಬಿಕ್ಕಟ್ಟಿಗೆ ಎರಡು ಮುಖ್ಯ ಕಾರಣಗಳು ಚೀನಾದ ನಿಯಂತ್ರಕ ಸಂಸ್ಥೆಗಳಿಂದ ಪ್ರಾಪರ್ಟಿ ಡೆವಲಪರ್ಗಳು ಸಾಲಗಳ ಬಗ್ಗೆ ತನಿಖೆ ಶುರುವಾಯಿತು. ತನ್ನ ಉದ್ಯಮದಲ್ಲಿ ಸ್ವಲ್ಪ ಭಾಗವನ್ನು ಮಾರಿಬಿಟ್ಟು, ಈ ಸಮಸ್ಯೆಯಿಂದ ಹೊರಬಂದು ಬಿಡೋಣ ಅಂದುಕೊಂಡಿತು ಎವರ್‌ಗ್ರ್ಯಾಂಡ್. ಆದರೆ ಇದೇ ಯೋಜನೆ ಉಲ್ಟಾ ಹೊಡೆದು, ಸಮಸ್ಯೆ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣ ಆಯಿತು. ಚೀನಾದ ಆಸ್ತಿ ಮಾರುಕಟ್ಟೆ ಹಿಂಜರಿತ ಆಗಿ ಮತ್ತು ಹೊಸ ಮನೆಗಳಿಗೆ ಬೇಡಿಕೆ ಇಳಿದುಹೋಯಿತು. ಇನ್ನು ನಗದು ಹರಿವು ಹೇಗೆ ಸಾಧ್ಯ? ನಿಮಗೆ ಊಹೆ ಮಾಡುವುದಕ್ಕೆ ಸಾಧ್ಯವಾ? ಎವರ್ಗ್ರ್ಯಾಂಡ್ಗೆ 30,000 ಕೋಟಿ ಅಮೆರಿಕನ್ ಡಾಲರ್ ಸಾಲ ಇದೆ. ಇದನ್ನೇ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 22,15,728 ಕೋಟಿ (22.15 ಲಕ್ಷ ಕೋಟಿ) ಆಗುತ್ತದೆ. ಸಾಲ ಇದೆ ಅಂತಷ್ಟೇ ಅಲ್ಲ, ಕಂಪೆನಿ ಷೇರು ಬೆಲೆ ಕುಸಿದಿದೆ ಹಾಗೂ ಜತೆಗೆ ಕ್ರೆಡಿಟ್ ರೇಟಿಂಗ್ಸ್ಗೆ ಪೆಟ್ಟು ಬಿದ್ದಿದೆ. ಪೂರೈಕೆದಾರರಿಗೆ ಕೊಡದೆ ಬಾಕಿ ಉಳಿಸಿಕೊಂಡ ದುಡ್ಡು, ಈಗಾಗಲೇ ಮನೆಯ ಸಲುವಾಗಿ ಭಾಗಶಃ ಹಣ ಪಾವತಿಸಿರುವ ಖರೀದಿದಾರರು ಸಹ ಇದ್ದಾರೆ. ಎವರ್ಗ್ರ್ಯಾಂಡ್ನ ಹಣಕಾಸಿನ ಬಿಕ್ಕಟ್ಟು ಮೊನ್ನೆ ಇಡೀ ಜಗತ್ತು ತಲ್ಲಣಿಸಿದ ಅತಿ ದೊಡ್ಡ ಹಾಗೂ ಮುಖ್ಯ ಸಂಗತಿ ಆಗಿತ್ತು.
PublicNext
23/09/2021 05:56 pm