ವಾಷಿಂಗ್ಟನ್: ಕ್ರಿಪ್ಟೋಕರೆನ್ಸಿಯಿಂದ ವಿಪತ್ತು ಸಂಭವಿಸಬಹುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್ ಡಿಜಿಟಲ್ ಸ್ವತ್ತುಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. "ನಾನು ಯುನೈಟೆಡ್ ಸ್ಟೇಟ್ಸ್ (ಅಮೆರಿಕದ) ಕರೆನ್ಸಿಯನ್ನು ಇಷ್ಟಪಡುತ್ತೇನೆ. ಅಮೆರಿಕದ ಜನರು ನಮ್ಮ ಕರೆನ್ಸಿಯಲ್ಲೇ ಹೂಡಿಕೆ ಮಾಡಬೇಕು" ಎಂದು ಟ್ರಂಪ್ ಸಲಹೆ ನೀಡಿದ್ದಾರೆ.
"ಕ್ರಿಪ್ಟೋಕರೆನ್ಸಿ ನಕಲಿಯಾಗಿರಬಹುದು. ಅವು ಏನೆಂದು ಯಾರಿಗೆ ಗೊತ್ತು? ಈ ಬಗ್ಗೆ ಖಂಡಿತವಾಗಿಯೂ ಜನರಿಗೆ ಹೆಚ್ಚು ತಿಳಿದಿಲ್ಲ. ಅಷ್ಟೇ ಅಲ್ಲದೆ ನಾನು ಕೂಡ ಅವುಗಳ ಬಗ್ಗೆ ಆಸಕ್ತಿ ಹೊಂದಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ.
PublicNext
02/09/2021 05:16 pm