ಖ್ಯಾತ ಉದ್ಯಮಿ, ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪೆನಿ ಹಾಗೂ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕಂಪೆನಿಯ ಸ್ಥಾಪಕ ಎಲಾನ್ ಮಸ್ಕ್ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಆದರೆ ಅತಿ ಚಿಕ್ಕ ವಯಸ್ಸಿನಲ್ಲೇ ಎಲೋನ್ ಮಸ್ಕ್ ತಾವು ಇಷ್ಟೊಂದು ಹೊರೆಯನ್ನು ಹೇಗೆ ನಿಬಾಯಿಸುತ್ತಾರೆ ಎನ್ನುವುದಕ್ಕೆ ಉತ್ತರ ನೀಡಿದ್ದಾರೆ.
ಟ್ವೀಟ್ ಮಾಡಿರುವ ಕ್ರೆಡಿಟ್ ಸಂಸ್ಥಾಪಕ ಕುನಾಲ್ ಷಾ, ''ಎಲೋನ್ ಮಸ್ಕ್ ಚಿಕ್ಕ ವಯಸ್ಸಿನಲ್ಲೇ ನಾಲ್ಕು 500 ಬಿಲಿಯನ್ ಕಂಪನಿಗಳನ್ನು ಏಕಕಾಲದಲ್ಲಿ ನಡೆಸಬಹುದು. ನಾನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಬಯಸುತ್ತೇನೆ: ಅವರು ಅದನ್ನು ಹೇಗೆ ನಿಬಾಯಿಸುತ್ತಾರೆ? ಇಂತಹ ಸಮಯದಲ್ಲಿ ಸ್ವಿಚಿಂಗ್ ಅನ್ನು ಹೇಗೆ ನಿರ್ವಹಿಸುತ್ತಾರೆ? ಅವರು ತಮ್ಮ ಸಂಸ್ಥೆಯನ್ನು ಹೇಗೆ ವಿನ್ಯಾಸಗೊಳಿಸುತ್ತಾನೆ'' ಎಂದು ಪ್ರಶ್ನಿಸಿದ್ದರು. ಬಳಿಕ ಮತ್ತೊಂದು ಟ್ವೀಟ್‌ನಲ್ಲಿ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಉತ್ತರ ನೀಡುವಂತೆ ಕೇಳಿದ್ದರು.
ಕುನಾಲ್ ಷಾ ಅವರ ಪ್ರಶ್ನೆಗೆ ಉತ್ತರಿಸಿದ ಎಲೋನ್ ಮಸ್ಕ್ , ''ನಾನು ಏಲಿಯನ್ (ಅನ್ಯಗ್ರಹ ಜೀವಿ)'' ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
15/02/2021 03:40 pm