ಬೆಳಗಾವಿ: ಬಡಿಗೇರ ವೃತ್ತಿ ಅಷ್ಟು ಸುಲಭವಲ್ಲ. ಆ ಕೆಲಸವನ್ನು ಆ ಸಮುದಾಯದವರಷ್ಟೇ ಮಾಡಬೇಕೆಂದೇನಿಲ್ಲ. ಜತೆಗೆ ಈ ಕೆಲಸ ಕಲಿಯುವುದು ಕೂಡ ಸರಳವಲ್ಲ. ಸತತ ಅಭ್ಯಾಸದಿಂದ ಬಡಿಗೇರ ಕೆಲಸದಲ್ಲಿ ತಕ್ಕ ಮಟ್ಟಿಗೆ ಪರಿಣಿತಿ ಹೊಂದಬಹುದು.
ಹೀಗೆ ಬಾಲ್ಯದಿಂದಲೂ ಬಡಿಗೇರ ಕೆಲಸ ಮಾಡುತ್ತ ಅದರಲ್ಲೇ ಸಣ್ಣ ಉದ್ಯಮ ಆರಂಭಿಸಿ ಯಶಸ್ಸು ಕಂಡ ಉದ್ಯಮಿ ಶಿವಾನಂದ್ ಬಡಿಗೇರ್ ಅವರ ಬಗ್ಗೆ ಇಂದಿನ ದೇಶ್ ಉದ್ಯಮಿ ಸಂಚಿಕೆಯಲ್ಲಿ ತಿಳಿಯೋಣ. ಸುಮಾರು 20 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಇವರು ಗಾಯತ್ರಿ ಫರ್ನಿಚರ್ಸ್ ಹೆಸರಿನಲ್ಲಿ ಉದ್ಯಮ ಆರಂಭಿಸಿದ್ದಾರೆ. ಇವರು ತಯಾರಿಸುವ ಎಲ್ಲ ಬಗೆಯ ಪೀಠೋಪಕರಣಗಳಿಗೆ ಜಿಲ್ಲೆ-ಹೊರಜಿಲ್ಲೆಗಳಿಂದ ಬೇಡಿಕೆ ಬಂದಿದೆ. ತಾವೂ ದುಡಿಯುತ್ತ ನಾಲ್ಕು ಜನಕ್ಕೆ ಕೆಲಸ ಕೊಟ್ಟು ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ. ಆಕರ್ಷಕ ವಿನ್ಯಾಸದ ಚೌಕಟ್ಟು ಬಾಗಿಲು ಚೌಕಟ್ಟು ಹಾಗೂ ಕದಗಳನ್ನು ಮಾಡೋದ್ರಲ್ಲಿ ನಿಷ್ಣಾತರಾಗಿರುವ ಶಿವಾನಂದ್ ಬಡಿಗೇರ್ ಅವರೊಂದಿಗೆ ನಮ್ಮ ಪ್ರತಿನಿಧಿ ನಾಗರಾಜ್ ನಡೆಸಿದ ಕಿರು ಸಂದರ್ಶನ ಇಲ್ಲಿದೆ.
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆಗಳ ಮಾಹಿತಿಗಾಗಿ ಸಂಪರ್ಕಿಸಿ +91 77609 65490
PublicNext
22/06/2022 10:22 pm