ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುವೈತ್‌ಗೆ ಭಾರತದಿಂದ 192 ಮೆಟ್ರಿಕ್ ಟನ್ ಸಗಣಿ ರಫ್ತು !

ಕುವೈತ್: ಕೊಲ್ಲಿ ರಾಷ್ಟ್ರಕ್ಕೆ ಭಾರತದಿಂದಲೇ ಸಗಣಿ ರಫ್ತಾಗುತ್ತಿದೆ.ಬರೋಬ್ಬರಿ 192 ಮೆಟ್ರಿಕ್ ಟನ್ ಸಗಣಿ ಕುವೈತ್‌ಗೆ ರಫ್ತಾಗುತ್ತಿದೆ ಎಂದು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದ್ದಾರೆ.

ಜೈಪುರ್ ಮೂಲದ ಸನ್‌ರೈಸರ್ ಅಗ್ರಿಲ್ಯಾಂಡ್ & ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕುವೈತ್‌ ನಿಂದ ಈ ಆದೇಶ ಬಂದಿದೆ.

ಕುವೈತ್ ಇದೇ ಮೊದಲ ಭಾರಿ ಸಗಣಿನ್ನ ಆಮದು ಮಾಡಿಕೊಳ್ತಾಯಿದ್ದು, ಈಗಾಗಲೇ ಸನ್ ರೈಸ್ ಆರ್ಗಾನಿಕ್ ಪಾರ್ಕ್ ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿಯೇ ಕಂಟೈನರ್‌ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡುವ ಕೆಲಸ ಕೂಡ ನಡೆಯುತ್ತಿದೆ ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ತಿಳಿಸಿದ್ದಾರೆ.

Edited By :
PublicNext

PublicNext

18/06/2022 09:23 am

Cinque Terre

43.65 K

Cinque Terre

10

ಸಂಬಂಧಿತ ಸುದ್ದಿ