ಬೆಳಗಾವಿ: ಬಹುಕಾಲದಿಂದಲೂ ಬಿದಿರು ಮನುಷ್ಯನ ಬದುಕಿಗೆ ಬಹು ಉಪಯೋಗಿ ಆಗುತ್ತಲೇ ಬಂದಿದೆ. ಆದರೆ ಆಧುನಿಕತೆ ಬೆಳೆದಂತೆಲ್ಲ ನಮ್ಮ ಬದುಕು ಬಿದಿರಿನಿಂದ ವಿಮುಖವಾಗುತ್ತಿದೆ. ಈ ನಡುವೆ ಜನರು ಬಿದಿರಿನ ಕರಕುಶಲ ವಸ್ತುಗಳನ್ನು ಇಷ್ಟಪಡುತ್ತಿದ್ದಾರೆ. ಆಕರ್ಷಕ ಪೀಠೋಪಕರಣಗಳನ್ನೂ ಇಷ್ಟಪಡುತ್ತಿದ್ದಾರೆ. ಇದನ್ನು ಅರಿತು ಸಣ್ಣ ಉದ್ಯಮ ಆರಂಭಿಸಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ ಗುಂಡೂರಾವ್ ಪಕ್ಕೀರಪ್ಪ ಮೇದಾರ್. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಬಸಾಪುರ ಗ್ರಾಮದ ಇವರಿಗೆ ಬಿದಿರು ಬದುಕು ಕೊಟ್ಟಿದೆ. ಈ ಕಲೆಯನ್ನು ತಮ್ಮ ತಂದೆಯ ಮೂಲಕವೇ ಸಿದ್ಧಿಸಿಕೊಂಡಿದ್ದಾರೆ. ತಂದೆಯಿಂದಲೇ ಈ ಕಲೆಯನ್ನು ಬಳುವಳಿಯಾಗಿ ಪಡೆದ ಮೇದಾರ ಸಹೋದರರು ತಿಂಗಳಿಗೆ ಲಕ್ಷಾಂತರ ವಹಿವಾಟು ನಡೆಸುತ್ತಿದ್ದಾರೆ.
ಕುಂದರನಾಡು ಮಹಾಲಕ್ಷ್ಮಿ ಬಂಬೂ ಆರ್ಟ್ & ಕ್ರಾಫ್ಟ್ ಹೆಸರಿನಲ್ಲಿ ಉದ್ಯಮ ಆರಂಭಿಸಿದ ಮೇದಾರ ಸಹೋದರರಿಗೆ ದೇಶಪಾಂಡೆ ಫೌಂಡೇಶನ್ ಸಕಾಲಕ್ಕೆ ಸಹಾಯ, ಸಹಕಾರ ನೀಡಿದೆ. ಸದ್ಯ ಇವರು ತಮ್ಮ ಕುಟೀರದಲ್ಲಿ 300 ಹೆಚ್ಚು ಬಿದಿರಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಸಣ್ಣ ಉದ್ದಿಮೆಯ ದೊಡ್ಡ ಯಶಸ್ಸಿನ ಬಗ್ಗೆ ಸ್ವತಃ ಗುಂಡೂರಾವ್ ಅವರೇ ಮಾತಾಡಿದ್ದಾರೆ. ಬನ್ನಿ ಕೇಳೋಣ..ತಿಳಿಯೋಣ.
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆಗಳ
ಮಾಹಿತಿಗಾಗಿ ಸಂಪರ್ಕಿಸಿ +91 77609 65490
PublicNext
21/05/2022 04:19 pm