ಡಿಸ್ಪುರ್ : ಯಾವುದೇ ವಸ್ತುವಾಗಲಿ ನಾವು ಅತ್ಯಂತ ಶ್ರಮವಹಿಸಿ ಅದನ್ನು ನಮ್ಮದಾಗಿಸಿಕೊಂಡಾಗ ಆಗುವ ಆನಂದಕ್ಕೆ ಪಾರವೇ ಇರಲ್ಲ. ಅದು ಕೋಟಿ ರೂ.ಗಳಿಗಿಂತಲೂ ಹೆಚ್ಚಾಗಿರುತ್ತದೆ. ಈ ಅನುಭವವನ್ನು ಅನುಭವಿಸಿದಾಗ ಮಾತ್ರ ಅರ್ಥವಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಸದ್ಯ ಇಲ್ಲೊಬ್ಬ ವ್ಯಕ್ತಿ ಪುಡಿಗಾಸು ಕೂಡಿಟ್ಟು ಸ್ಕೂಟರ್ ಖರೀದಿಸಿದ್ದಾರೆ. ಬೈಕ್ ಶೋರೂಂ ಗೆ ಬಂದ ವ್ಯಕ್ತಿ ಬುಟ್ಟಿಯಲ್ಲಿ ತಂದ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಿದ್ದಾರೆ.
ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಸಣ್ಣ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದರು. ತನ್ನ ದುಡಿಮೆಯ ಒಂದೊಂದು ರೂಪಾಯಿ ಕೂಡಿಸಿಟ್ಟು ಸ್ಕೂಟರ್ ಖರೀದಿಸಿದ್ದಾರೆ. ಸದ್ಯ ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್ ನೀಡಲಾಗಿದೆ.
PublicNext
18/02/2022 04:46 pm