ಅವರು ರೈತ ಕುಟುಂಬದಲ್ಲಿ ಹುಟ್ಟಿದ ಒಬ್ಬ ರೈತನ ಮಗ. ಹೊಲದಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆಯುವ ಕಾರ್ಯವೈಖರಿಯಂತೆಯೆ ಯುವ ಸಮುದಾಯದಲ್ಲಿ ಜ್ಞಾನವೆಂಬ ಬೀಜವನ್ನು ಬಿತ್ತಿ ಯಶಸ್ಸೆಂಬ ಬೆಳೆ ಬೆಳೆಯುತ್ತಿರುವ ಸಾಧಕ ಕೃಷಿಕ. ಹಾಗಿದ್ದರೆ ಯಾರು ಆ ಸಾಧಕರು? ಅವರ ಸಾಧನೆಯಾದರೂ ಏನು ಏನು ಅಂತಿರಾ..? ಇಲ್ಲಿದೆ ಸಾಧಕರ ಸಕ್ಸಸ್ ಫುಲ್ ಸ್ಟೋರಿ.
ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗೆ ಗದೆಯನ್ನು ಕೊಟ್ಟು ಎದೆಯಲ್ಲಿ ಆತ್ಮವಿಶ್ವಾಸ ಹುಟ್ಟುಹಾಕಿದ ಸಂಸ್ಥೆಯೇ ದಿ ಕ್ಲಾಸಿಕ್ ಸ್ಟಡಿ ಸರ್ಕಲ್. ಸ್ಪರ್ಧಾತ್ಮಕ ಯುಗದ ಯುವ ಸಮುದಾಯದ ಬಹುದೊಡ್ಡ ಕನಸಿನ ಸಾಕಾರದ ಕೇಂದ್ರಕ್ಕೆ ಈಗ 25ರ ಸಂಭ್ರಮ. ಧಾರವಾಡದ ಸಪ್ತಾಪೂರ ಬಾವಿ ಸರ್ಕಲ್ ಬಳಿಯಲ್ಲಿರುವ ದಿ ಕ್ಲಾಸಿಕ್ ಸ್ಟಡಿ ಸರ್ಕಲ್ ಸಂಸ್ಥೆ ಈಗ ಇಪ್ಪತ್ತೈದು ವಸಂತಗಳನ್ನು ಪೂರೈಸಿದೆ. ಈ ಸಕ್ಸಸ್‍ಪುಲ್ ಜರ್ನಿಗೆ ಮೂಲ ಆಧಾರವೇ ಕ್ಲಾಸಿಕ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಶನ್ಸ್ ಛೇರ್ಮನ್ ಶ್ರೀ ಲಕ್ಷ್ಮಣ ಎಸ್ ಉಪ್ಪಾರ ಅವರು.
ಕರ್ನಾಟಕ ಕ್ಲಾಸಿಕ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್, ಕ್ಲಾಸಿಕ್ ಕೆಎಎಸ್ ಆ್ಯಂಡ್ ಐಎಎಸ್ ಸ್ಟಡಿ ಸರ್ಕಲ್, ಸ್ಪರ್ಧಾ ಸ್ಫೂರ್ತಿ ಪಬ್ಲಿಷರ್ಸ್ ಆ್ಯಂಡ್ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್, ಕ್ಲಾಸಿಕ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕ್ಲಾಸಿಕ್ ಪಿಯು ಆ್ಯಂಡ್ ಡಿಗ್ರಿ ಕಾಲೇಜು ಹೀಗೆ ಹಲವಾರು ಅಂಗಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾರ್ಥಿಗಳಿಗೆ ಮತ್ತಷ್ಟು ಜ್ಞಾನವನ್ನು ನೀಡಲು ಡಿಜಿಟಲ್ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಹಾಗೂ ಕ್ಲಾಸಿಕ್ ಎಜುಕೇಶನ್ ಯೂಟ್ಯೂಬ್ ಚಾನೆಲ್ ಹಾಗೂ ಕ್ಲಾಸಿಕ್ ಎಜುಕೇಶನ್ ಡಿಜಿಟಲ್ ಆ್ಯಪ್ ಮೂಲಕ ತಂತ್ರಜ್ಞಾನ ಆಧರಿತ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಲು ವಿನೂತನ ಪ್ರಯೋಗಕ್ಕೆ ದಿ ಕ್ಲಾಸಿಕ್ ಸ್ಟಡಿ ಸರ್ಕಲ್ ಮುಂದಾಗಿದೆ. ಹಾಗಿದ್ದರೆ ಸಾಧಕರ ವೈಯಕ್ತಿಕ ಪರಿಚಯ ಇಲ್ಲಿದೆ ನೋಡಿ.
ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಧರ್ಮಟ್ಟಿ ಗ್ರಾಮದವರಾದ ಶ್ರೀ ಲಕ್ಷ್ಮಣ ಉಪ್ಪಾರ ಅವರು ಇಂಜಿನಿಯರಿಂಗ್ ವಿಭಾಗದಲ್ಲಿ ಮೆಕ್ಯಾನಿಕಲ್ ಪದವಿ ಪಡೆದರೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬದುಕಿನಲ್ಲಿ ಯಾವುದೇ ಸರ್ಕಾರಿ ನೌಕರಿ ಸಿಕ್ಕಿದ್ದರೂ ಈ ಬೃಹತ್ ಸಂಸ್ಥೆಯ ಕನಸು ಸಾಕಾರಗೊಳ್ಳುತ್ತಿರಲಿಲ್ಲ. ಆ ದೇವರ ಇಚ್ಛೆಯೇ ಈ ಸೇವೆಗೆ ನನ್ನನ್ನು ಅಣಿಮಾಡಿದ್ದಾನೆ ಎನ್ನುತ್ತಾರೆ ಸಾಧಕರಾದ ಶ್ರೀ ಲಕ್ಷ್ಮಣ ಉಪ್ಪಾರ ಅವರು.
ಇದೆಲ್ಲ ಕೆಲವೊಂದು ಪರಿಚಯವಾದರೆ ಇನ್ನೂ ವಿಶೇಷವಾಗಿ ನೀವೆಲ್ಲರೂ ನೊಡಲೇಬೇಕಾದ ವಿಶೇಷವಾದ ಅಂಶ ಅಂದರೆ ಅದು ಕ್ಲಾಸಿಕ್ ಸ್ಟಡಿ ಸರ್ಕಲ್ ಮತು ಶಿಕ್ಷಣ ಸಂಸ್ಥೆಗಳು. ಹೌದು ಕರ್ನಾಟಕ ಕ್ಲಾಸಿಕ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್, ಕ್ಲಸಿಕ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕ್ಲಾಸಿಕ್ ಪಿಯು ಆ್ಯಂಡ್ ಡಿಗ್ರಿ ಕಾಲೇಜು ಭವ್ಯವಾದ ಹಾಗೂ ಸುಸಜ್ಜಿತವಾದ ಕಟ್ಟಡ ವಿಶೇಷವಾಗಿ ಓದಲು ಹೇಳಿ ಮಾಡಿಸಿದ ವಾತಾವರಣದಲ್ಲಿದೆ. 1997ರಿಂದಲೇ ಕ್ಲಾಸಿಕ್ ಸ್ಟಡಿ ಸರ್ಕಲ್ ಆರಂಭಗೊಂಡಿದ್ದು, ಸಾಕಷ್ಟು ಪ್ರತಿಭೆಗಳ ಅನಾವರಣಕ್ಕೆ ಅಡಿಪಾಯ ಹಾಕಲಾಗಿದೆ. ಅಧುನಿಕ ತಂತ್ರಜ್ಞಾನದ ಕ್ಲಾಸ್ ರೂಮ್, ಸ್ಟಡಿ ಮೆಟಿರೀಯಲ್, ಓದಲು ಪೂರಕವಾದ ಪುಸ್ತಕ ಭಂಡಾರದ ಜೊತೆಗೆ ಸಂಪನ್ಮೂಲ ಬೋಧಕ ವೃಂದದ ಜೊತೆಗೆ ಶಿಕ್ಷಣ ಸೇವೆಯನ್ನು ಸಲ್ಲಿಸುತ್ತಿದೆ ದಿ ಕ್ಲಾಸಿಕ್ ಸ್ಟಡಿ ಸರ್ಕಲ್. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಸ್ಪರ್ಧಾರ್ಥಿಗಳಿಗೆ ಕೆಎಎಸ್, ಐಎಎಸ್, ಐಪಿಎಸ್, ಬಿಎಡ್, ಡಿಎಡ್, ಟಿಇಟಿ-ಸಿಇಟಿ, ಪಿಎಸೈ-ಪಿಸಿ, ಎಫ್‍ಡಿಎ-ಎಸ್‍ಡಿಎ, ಪಿಡಿಒ, ಆರ್‍ಎಸ್‍ಐ-ಇಎಸ್‍ಐ, ಬ್ಯಾಂಕ್ ಪಿಒ, ಎಸ್‍ಎಸ್‍ಸಿ, ಆರ್‍ಆರ್‍ಬಿ, ಎಇ-ಜೆಇ ಸೇರಿದಂತೆ ಹಲವಾರು ಹುದ್ದೆಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡುವುದಲ್ಲದೆ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆಯ ಮೂಲಕ ಮಾಹಿತಿ ನೀಡುತ್ತ ಅದೆಷ್ಟೋ ಯುವಜನರ ಕನಸನ್ನು ಸಾಕಾರಗೊಳಿಸಿರುವ ಕೀರ್ತಿ ಶ್ರೀ ಲಕ್ಷ್ಮಣ ಉಪ್ಪಾರ ಅವರಿಗೆ ಸಲ್ಲುತ್ತದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಸಾವಿರಾರು ಅಭ್ಯರ್ಥಿಗಳು ಇಂದು ರಾಜ್ಯ ಹಾಗೂ ದೇಶದ ವಿವಿಧ ಮೂಲೆಗಳಲ್ಲಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಾಧನೆಯ ರಹಸ್ಯವನ್ನು ಶ್ರೀ ಲಕ್ಷ್ಮಣ ಎಸ್ ಉಪ್ಪಾರ ಇಲ್ಲಿ ಬಿಚ್ಚಿಟ್ಟಿದ್ದಾರೆ ಕೇಳಿ.
ಬೈಟ್ : ಲಕ್ಷ್ಮಣ ಎಸ್ ಉಪ್ಪಾರ(ಚೇರ್ಮನ್ ಕ್ಲಾಸಿಕ್ ಗ್ರುಪ್ ಆಫ್ ಇನ್ಸ್‍ಟಿಟ್ಯೂಷನ್ಸ್)
ಕ್ಲಾಸಿಕ್ ಸಂಸ್ಥೆಯಲ್ಲಿ ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಾಹನ ಹಾಗೂ ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.
ಪ್ರಿಯ ವೀಕ್ಷಕರೆ, ನಿಮಗೆ ಮತ್ತೊಂದು ಇಂಟ್ರಸ್ಟಿಂಗ್ ವಿಷಯ ತೋರಿಸಲೇ ಬೇಕು. ಅದು ಏನಂತೀರಾ. ಅದೇ ದಿ ಕ್ಲಾಸಿಕ್ ಸ್ಟಡಿ
ಸರ್ಕಲ್‍ನ ಕ್ಲಾಸಿಕ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್. ಸುತ್ತಲೂ ಹಚ್ಚ ಹಸುರಿನ ಹಾಸು. ನೋಡಿದರೇ ಮನಸ್ಸಿಗೆ ಮುದನೀಡುವ ವಾತಾವರಣ. ಈ ಭವ್ಯ ಕಟ್ಟಡ ನಿಸರ್ಗದ ಮಡಿಲಲ್ಲಿ ಅರಳಿ ನಿಂತಿದೆ. ಲಕ್ಷ್ಮಣ ಉಪ್ಪಾರ ಅವರ ಕನಸಿನ ಕೂಸು ಕ್ಲಾಸಿಕ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್. ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಈ ಶಾಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್, ಆಧುನಿಕ ತಂತ್ರಜ್ಞಾನದ ಲ್ಯಾಬೋರೇಟರಿ, ಉತ್ಕøಷ್ಣ ಗುಣಮಟ್ಟದ ಗ್ರಂಥಾಲಯದೊಂದಿಗೆ ಎಲ್ಲಿಯೂ ಕೇಳಿರದ ಗಣಿತ ವಿಭಾಗದ ಲ್ಯಾಬ್ ಕೂಡ ಇಲ್ಲಿ ಲಭ್ಯವಿದ್ದು, ಐಸಿಎಸ್‍ಇ ಇಂಟರ್‍ನ್ಯಾಷನಲ್ ಬೋರ್ಡ್ ಸಿಲಬಸ್ ಹೊಂದಿರುವ ಅತ್ಯುತ್ತಮ ಗುಣಮಟ್ಟದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಕ್ಕಳಿಗೆ ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಡ್ರಾಪ್ ಮಾಡಲು ಸುಮಾರು 50ಕ್ಕೂ ಹೆಚ್ಚು ಬಸ್‍ಗಳನ್ನು ವ್ಯವಸ್ಥೆ ಮಾಡಿದ್ದು, ಇಲ್ಲಿಯ ವಿಶೇಷ ಎನ್ನಬಹುದು.
ಇಷ್ಟೇ ಅಲ್ಲ, ಪ್ರತಿ ರವಿವಾರ ಸಂಸ್ಥೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮಾದರಿ ಪರೀಕ್ಷೆಗಳನ್ನು ಧಾರವಾಡ, ಕಲಬುರ್ಗಿ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಪ್ರತಿವಾರ ನೂರಾರು ಅಭ್ಯರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.
ಶ್ರೀ ಲಕ್ಷ್ಮಣ ಎಸ್ ಉಪ್ಪಾರ ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳನ್ನು ಇವರಿಗೆ ನೀಡಲಾಗಿದ್ದು, ಇವುಗಳಲ್ಲಿ ಪ್ರಮುಖವಾದವುಗಳೆಂದರೆ,ಮನ್ಸೂರು ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಇತ್ತೀಚೆಗಷ್ಟೇ ವಿಜಯ ಕರ್ನಾಟಕ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ, ಸುವರ್ಣ 24 x 7 ನ್ಯೂಸ್ ಚಾನೆಲ್ ಮತ್ತು ಕನ್ನಡ ಪ್ರಭ ದಿನಪತ್ರಿಕೆಯ ನಾರ್ಥ್ ಕರ್ನಾಟಕ ಬಿಸಿನೆಸ್ ಅವಾರ್ಡ್, ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಇನ್ನು ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಶಿಕ್ಷÀಣ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಉಪ್ಪಾರ ಅವರು ತಮ್ಮನ್ನು ಬೆಳೆಸಿದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಪರಿಪೂರ್ಣತೆಯತ್ತ ರಾಜ್ಯಾದ್ಯಂತ ಮುನ್ನಡೆಯುತ್ತಿದೆ. ಅಲ್ಲದೇ ಅದೆಷ್ಟೋ ಜನರ ಬಾಳಿಗೆ ದಾರಿದೀಪವಾಗಿರುವ ದಿ ಕ್ಲಾಸಿಕ್ ಸ್ಟಡಿ ಸರ್ಕಲ್ ಸಾಕಷ್ಟು ಉಚಿತ ಕಾರ್ಯಾಗಾರ ನಡೆಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಪ್ರತಿಭೆಗಳ ಪ್ರೋತ್ಸಾಹಕ್ಕೆ ಮುಂದಾಗಿರುವುದು ನಿಜಕ್ಕೂ ವಿಶೇಷವಾಗಿದೆ.
ಕ್ಲಾಸಿಕ್ ಗ್ರೂಪ್ ಆಫ್ ಇನಸ್ಟಿಟ್ಯೂಶನ್ಸ್ ಚೇರ್ಮನ್ ಆಗಿರುವ ಲಕ್ಷ್ಮಣ ಉಪ್ಪಾರ ಅವರ ಸೃಜನಶೀಲತೆ, ಸರಳ ವ್ಯಕ್ತಿತ್ವ, ಸ್ವಚ್ಚ ಹಾಗೂ ನೇರನುಡಿಗಳಿಂದ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇತ್ತೀಚೆಗಷ್ಟೆ ಇದರ ಸೇವಾ ಮನೋಭಾವಕ್ಕೆ ಸಂದ ಪ್ರತಿಫಲವೆಂಬಂತೆ ರಾಷ್ಟ್ರದ ಪ್ರುಮುಖ ಬ್ಯಾಂಕ್‍ಗಳಲ್ಲೊಂದಾದ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕರಾಗಿ ಆಯ್ಕೆಯಾಗಿ ಮತ್ತೊಂದು ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡು ಅದನ್ನೂ ಕೂಡಾ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲದಕ್ಕೂ ಶ್ರಮದಾಯಕ ಕೆಲಸ ಮಾಡುವ ನಮ್ಮ ಸಿಬ್ಬಂದಿಯ ಪ್ರಾಮಾಣಿಕ ಸೇವೆಯೆ ಕಾರಣ ಎನ್ನುತ್ತಾರೆ ಶ್ರೀ ಲಕ್ಷ್ಮಣ ಎಸ್ ಉಪ್ಪಾರ ಅವರು.
ಒಟ್ಟಿನಲ್ಲಿ ಧಾರವಾಡದ ದಿ ಕ್ಲಾಸಿಕ್ ಸ್ಟಡಿ ಸರ್ಕಲ್ ಎಂಬ ಬೃಹತ್ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ ಶ್ರೀ ಲಕ್ಷ್ಮಣ ಎಸ್ ಉಪ್ಪಾರ ಅವರ ಸಾಧನೆಯ ಕೀರ್ತಿ ದೇಶಾದ್ಯಂತ ಹಾಗೂ ಜಗತ್ತಿನಾದ್ಯಂತ ಪಸರಿಸಲಿ. ಇವರ ಮಾರ್ಗದರ್ಶನ ಪಡೆದ ಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.
PublicNext
29/07/2022 05:14 pm