ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಮಾನ್ಯ ಜನರ ಮೇಲೆ ಮತ್ತೆ ಹಣದುಬ್ಬರದ ಹೊಡೆತ: ಸತತ 3ನೇ ಬಾರಿಗೆ ರೆಪೋ ದರ ಏರಿಕೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರ ಅಂದರೆ ರೆಪೋ ರೇಟ್ ಹೆಚ್ಚಿಸಿದೆ.

ಆರ್‌ಬಿಐನ 2 ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪರಿಷ್ಕೃತ ದರದ ಪ್ರಕಾರ, ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇಕಡಾ 4.9ರಿಂದ ಶೇಕಡಾ 5.4 ಕ್ಕೆ ಏರಿಕೆ ಮಾಡಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಘೋಷಣೆಯ ನಂತರ ಬ್ಯಾಂಕ್ EMI ಹೊರೆ ಹೆಚ್ಚಾಗಲಿದೆ.

ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ 6.2 ರಷ್ಟು ಜಿಡಿಪಿ ಪ್ರಗತಿ ಅಂದಾಜಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.1 ಜಿಡಿಪಿ ಪ್ರಗತಿ ಅನುಮಾನಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.2 ಜಿಡಿಪಿ ಪ್ರಗತಿ ದರ ಅಂದಾಜಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

2023- 24 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 6.7 ಜಿಡಿಪಿ ಪ್ರಗತಿ ಸಾಧಿಸುವ ಗುರಿ ಇಟ್ಟು ಕೊಳ್ಳಲಾಗಿದೆ ಎಂದಿದ್ದಾರೆ. ಹಣದುಬ್ಬರದ ಈ ಹೊರತಾಗಿಯೂ ಭಾರತದ ಆರ್ಥಿಕತೆಯು ಸಶಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ರೆಪೋ ದರ ಎಂದರೇನು?

ಗಮನಾರ್ಹವಾಗಿ, ರೆಪೋ ದರವು ಬ್ಯಾಂಕ್‌ಗೆ ಆರ್‌ಬಿಐ ಸಾಲವನ್ನು ನೀಡುವ ದರವಾಗಿದೆ ಮತ್ತು ಇದರ ಆಧಾರದ ಮೇಲೆ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಆದರೆ ರಿವರ್ಸ್ ರೆಪೊ ದರ ಅಂದರೆ ಬ್ಯಾಂಕ್‌ಗಳ ಠೇವಣಿಗಳ ಮೇಲೆ ಆರ್‌ಬಿಐ ನೀದುಅವ್ ಬಡ್ಡಿ ಯಾಗಿರುತ್ತದೆ. ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದಾಗ, ಬ್ಯಾಂಕ್‌ಗಳ ಮೇಲಿನ ಹೊರೆ ಹೆಚ್ಚಾಗುತ್ತದೆ. ಬ್ಯಾಂಕ್ ನಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಕೂಡಾ ಅಧಿಕವಾಗುತ್ತದೆ.

Edited By : Vijay Kumar
PublicNext

PublicNext

05/08/2022 01:50 pm

Cinque Terre

35.28 K

Cinque Terre

2

ಸಂಬಂಧಿತ ಸುದ್ದಿ