ಬೆಂಗಳೂರು: ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (KMF) ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ.
ಈಗಿರುವ ಬೆಲೆಯಿಂದ 1 ರಿಂದ 3 ರೂಪಾಯಿವರೆಗೆ ಬೆಲೆ ಏರಿಕೆ ಆಗಲಿದ್ದು, ಹಾಲಿನ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗೋದಿಲ್ಲ. ಉಳಿದಂತೆ, 43 ರೂಪಾಯಿ ಇದ್ದ ಒಂದು ಲೀಟರ್ ಮೊಸರಿನ ಬೆಲೆ 46 ರೂಪಾಯಿ ಆಗಲಿದ್ದು, ಅರ್ಧ ಲೀಟರ್ ಮೊಸರಿಗೆ 22 ಇದ್ದದ್ದು 24 ರೂಪಾಯಿ ಹೇರಿಕೆ ಆಗಲಿದೆ. 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂಪಾಯಿ ಹೆಚ್ಚಳವಾಗಲಿದೆ.
PublicNext
17/07/2022 04:30 pm