ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜನರಿಗೆ ಮೊದಲ ಕೊಡುಗೆ ನೀಡಿದ್ದಾರೆ. ಪೆಟ್ರೋಲ್ ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 3 ರೂ. ಕಡಿತ ಮಾಡಲಾಗಿದೆ ಎಂದು ಶಿಂಧೆ ಗುರುವಾರ ಘೋಷಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಶಿಂಧೆ ಈ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರದ ಜನರಿಗೆ ಮತ್ತು ಮರಾಠಿ ಮನೂಗಳಿಗೆ ಇದೊಂದು ದೊಡ್ಡ ನೆಮ್ಮದಿ ಎಂದು ಶಿಂಧೆ ಅವರ ಘೋಷಣೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶ್ಲಾಘಿಸಿದ್ದಾರೆ. ಏಕನಾಥ ಶಿಂಧೆ ಅವರ ನೂತನ ಸರ್ಕಾರ ಪೆಟ್ರೋಲ್ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಲೀಟರ್‌ಗೆ 3 ರೂ. ಕಡಿತ ಮಾಡಲು ನಿರ್ಧರಿಸಿದೆ ಎಂದು ಟ್ವೀಟ್ ಮಾಡಿರುವ ಫಡ್ನವಿಸ್, ಈ ನಿರ್ಧಾರದಿಂದಾಗಿ ರಾಜ್ಯ 6,000 ಕೋಟಿ ರೂ. ಹೆಚ್ಚುವರಿ ಹೊರೆಯನ್ನು ಹೊರಲಿದೆ ಎಂದಿದ್ದಾರೆ.
PublicNext
14/07/2022 03:58 pm