ಬೆಂಗಳೂರು: ಎಲ್ಲಾ ದರ ಏರಿಕೆಯ ನಂತರ ಇದೀಗ ನಂದಿನಿ ಹಾಲಿನ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ. ಹೌದು, ಕರ್ನಾಟಕ ಹಾಲು ಒಕ್ಕೂಟವು ಹಾಲಿನ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹೇಳಿಕೆ. 14 ಹಾಲು ಒಕ್ಕೂಟಗಳಿಂದ ಒತ್ತಡ ಹೆಚ್ಚಾಗಿದೆ.
ಪ್ರತಿ ಲೀ.ಗೆ 5 ರೂ. ಏರಿಸುವಂತೆ ಒಕ್ಕೂಟಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಕರ್ನಾಟಕ ಹಾಲು ಒಕ್ಕೂಟವು ಸರ್ಕಾರದ ಮುಂದೆ 2 ರೂ ಏರಿಕೆ ಪ್ರಸ್ತಾವನೆ ಇಡಲಾಗಿದೆ. ವಿದ್ಯುತ್ ದರ ಏರಿಕೆ ಬಳಿಕ ಕೆಎಂಎಫ್ ಅಧ್ಯಕ್ಷರು ಸಿಎಂನ ಭೇಟಿ ಮಾಡಿದ್ದಾರೆ ಹಾಲಿನ ದರ ಏರಿಕೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಈಗ ಸರ್ಕಾರದ ಎಲ್ಲಾ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಇದೀಗ ಹಾಲಿನ ದರವೂ ಇನ್ನೆರಡು ದಿನಗಳಲ್ಲಿ ಏರಿಕೆಯಾಗಲಿದೆ. ಪಬ್ಲಿಕ್ ನೆಕ್ಸ್ಟ್ ಗೇ KMF ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹೇಳಿಕೆ.
PublicNext
08/04/2022 05:13 pm