ಬೆಂಗಳೂರು: ಕಮರ್ಶಿಯಲ್ ಎಲ್‌ಪಿಜಿ ಬೆಲೆ ಏರಿಕೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಏಪ್ರಿಲ್ 1ರಿಂದ ಹೋಟೆಲ್ ಊಟ-ತಿಂಡಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗಕ್ಕೆ ಮತ್ತೊಂದು ಆಘಾತ ಎದುರಾಗುವ ಸಂಭವ ಇದೆ.
ಈಗಾಗಲೇ ಅಡುಗೆ ಎಣ್ಣೆ ದರ ಅನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿದ್ದು ಇತರೆ ದಿನಸಿ ಸಾಮಗ್ರಿಗಳ ಬೆಲೆ ಕೂಡ ಏರಿಕೆಯಾಗಿದೆ. ಈ ಕಾರಣದಿಂದ ತಮ್ಮೆ ಮೇಲಿನ ಹೊರೆ ತಗ್ಗಿಸಿಕೊಳ್ಳಲು ಹೋಟೆಲ್ ಮಾಲೀಕರು ಊಟ-ತಿಂಡಿಯ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳಿಂದ ಹೋಟೆಲ್ ತಿಂಡಿ, ತಿನಿಸುಗಳ ಬೆಲೆಯಲ್ಲಿ ಹೆಚ್ಚಳವಾಗುವುದರಲ್ಲಿ ಅನುಮಾವಿಲ್ಲ ಎನ್ನಲಾಗಿದ್ದು, ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ಶೀಘ್ರದಲ್ಲಿ ನಿರ್ಧಾರ ತೆಗೆದಕೊಳ್ಳಲಾಗುವುದು ಎಂದು ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದಲ್ಲದೇ ಪ್ರತಿ ಲೀಟರ್ಗೆ ನಂದಿನ ಹಾಲಿನ ಬೆಲೆ 2 ರೂ. ಹಾಲಿನ ಪರಿಷ್ಕರಣೆ ಆಗಲಿದ್ದು,ಕಾಫಿ, ಟೀ ಸೇರಿದಂತೆ ಹಾಲಿನ ಉತ್ಪನಗಳಲ್ಲಿ ಕೂಡ ಹೆಚ್ಚಿನ ಬೆಲೆ ಏರಿಕೆ ಆಗುವುದರಲ್ಲಿ ಸಂದೇಹವಿಲ್ಲ.
PublicNext
21/03/2022 03:28 pm