ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ವರ್ಷದ ಆಯವ್ಯಯ ಮಂಡಿಸುತ್ತಿದ್ದು ಹಲವು ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ.
ಇನ್ನು ಸಿಹಿ ಸುದ್ದಿ ಎಂದರೆ ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಈ ಬಾರಿಯ ಮುಂಗಡ ಪತ್ರದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ನರ್ಮದಾ, ಪೆನ್ನಾರ್, ಕಾವೇರಿ, ಗೋದಾವರಿ, ಹಾಗೂ ಕೃಷ್ಣಾ ನದಿಗಳ ಜೋಡಣೆಗೆ ಡಿಪಿಆರ್ ಸಮೇತ ಯೋಜನೆ ತಯಾರಾಗಿದೆ. ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆ ಯೋಜನೆ ಕೆನ್- ಬೇಟ್ವಾ ಅಡಿಯಲ್ಲಿ 44,605 ಕೋಟಿ ರೂ. ವೆಚ್ಚದಲ್ಲಿ 9.05 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇದರ ಅಡಿ 65 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
PublicNext
01/02/2022 11:52 am