ನವದೆಹಲಿ: ಚಿನ್ನ ಎಂದರೆ ಎಲ್ಲರಿಗೂ ಇಷ್ಟ. ಕೆಲವರು ಆಭರಣಗಳನ್ನು ಉಳಿತಾಯ ಹಾಗೂ ಹೂಡಿಕೆಯ ಮಾರ್ಗವಾಗಿ ಖರೀದಿಸುತ್ತಾರೆ. ಕೇಂದ್ರ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಚಿನ್ನಾಭರಣ ದರ ಕಡಿಮೆ ಆಗುತ್ತಾ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ವಾಣಿಜ್ಯ ಸಚಿವಾಲಯ ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆಭರಣ ರಫ್ತು ಉತ್ತೇಜನಾ ಮಂಡಳಿಯು ಆಮದು ಸುಂಕವನ್ನು ಈಗಿರುವ ಶೇ.7.5ರಿಂದ ಶೇ.4ಕ್ಕೆ ಇಳಿಸುವಂತೆ ವಾಣಿಜ್ಯ ಸಚಿವಾಲಯವನ್ನು ಕೋರಿದೆ ಎಂಬ ಮಾಹಿತಿ ಇದೆ.
ಚಿನ್ನದ ಮೇಲಿನ ಆಮದು ಸುಂಕ ಕಡಿಮೆಯಾದರೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನಗಳ ಮೇಲಿನ ಆಮದು ಸುಂಕವನ್ನು ಶೇಕಡಾ 7.5 ರಿಂದ 2.5 ಕ್ಕೆ ಇಳಿಸಲು ಆಭರಣ ಮತ್ತು ರತ್ನ ರಫ್ತು ಮಂಡಳಿಯು ತನ್ನ ಬಜೆಟ್ ಪೂರ್ವ ಶಿಫಾರಸುಗಳಲ್ಲಿ ಶಿಫಾರಸು ಮಾಡಿದೆ. ಈ ಮಟ್ಟಿನ ನಿರ್ಧಾರ ಕೈಗೊಂಡರೆ ಕೇಂದ್ರ ಸರ್ಕಾರ ಒಂದೇ ಏಟಿಗೆ ಸುಂಕ ಇಳಿಸಿದರೆ, ಬೆಲೆ ಮತ್ತಷ್ಟು ಕುಸಿಯಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
PublicNext
24/01/2022 03:46 pm