ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯ ದರದಲ್ಲಿ ಭಾರೀ ಇಳಿಕೆ, ಮನೆಯಲ್ಲೇ ಬಾರ್‌ಗೆ ಅನುಮತಿ: ಎಂಪಿ ಸರ್ಕಾರ

ಭೋಪಾಲ್: ನೂತನ ಅಬಕಾರಿ ನೀತಿ 2022–23ಕ್ಕೆ ಅನುಮೋದನೆ ನೀಡಿರುವ ಮಧ್ಯ ಪ್ರದೇಶ ಸರ್ಕಾರ, ಮದ್ಯದ ದರದಲ್ಲಿ ಶೇ 20ರವರೆಗೆ ಇಳಿಕೆ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವಾರ್ಷಿಕ 1 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, ವರ್ಷಕ್ಕೆ 50,000 ರೂ. ಶುಲ್ಕ ಪಾವತಿಸಿ ಮನೆಯಲ್ಲಿಯೇ ಬಾರ್ ಹೊಂದಲು ಲೈಸನ್ಸ್ ದೊರೆಯಲಿದೆ. ಇಂದೋರ್, ಭೋಪಾಲ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಕೆಲವು ಸೂಪರ್‌ ಮಾರ್ಕೆಟ್‌ಗಳಲ್ಲಿಯೂ ಮದ್ಯ ಮಾರಾಟ ತೆರೆಯಲು ಸರ್ಕಾರ ಅನುಮತಿ ನೀಡಲಿದೆ.

ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಳಿಗೆ ಮತ್ತು ನಾಲ್ಕು ದೊಡ್ಡ ನಗರಗಳ ಆಯ್ದ ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಳಿಗೆ ತೆರೆಯಲು ಅನುಮತಿಯ ಜತೆಗೆ ಮನೆಯಲ್ಲಿಯೇ ಮಿನಿ ಬಾರ್ ಹೊಂದಲು ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ.

Edited By : Vijay Kumar
PublicNext

PublicNext

19/01/2022 05:07 pm

Cinque Terre

27.18 K

Cinque Terre

6

ಸಂಬಂಧಿತ ಸುದ್ದಿ