ನವದೆಹಲಿ: ಕಳೆದ ಎರಡು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಇಂಧನ ದರ ಇಂದು (ಅಕ್ಟೋಬರ್ 20) ಮತ್ತೆ ಏರಿಕೆ ಕಂಡಿದೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 35 ಪೈಸೆಯಷ್ಟು ಹೆಚ್ಚಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 106.19 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 112.11 ರೂಪಾಯಿ ಇದೆ. ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 103.31 ರೂಪಾಯಿ ಆಗಿದ್ದರೆ, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 106.78 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 109.89ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 100.75 ರೂ. ಗೆ ಏರಿಕೆಯಾಗಿದೆ.
ಗಮನಿಸಬೇಕಾದ ಅಂಶವೆಂದರೆ ವಿಮಾನಗಳಿಗೆ ಬಳಸುವ ಟರ್ಬೈನ್ ಇಂಧನ (ಎಟಿಎಫ್ ಅಥವಾ ಜೆಟ್ ಇಂಧನ) ಬೆಲೆಗಿಂತ ಪೆಟ್ರೋಲ್ ಈಗ ಶೇಕಡಾ 34 ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಲೀಟರ್‌ಗೆ 79 ರೂ. ಇದೆ.
PublicNext
20/10/2021 08:34 am