ನವದೆಹಲಿ: ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಲೇ ಸಾಗಿದೆ. ಇದು ಅಡುಗೆ ಅನಿಲ (ಎಲ್‌ಪಿಜಿ) ದರದ ಮೇಲೆ ಪರಿಣಾಮ ಬೀರಿದೆ. ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದೆಹಲಿಯಲ್ಲಿ 719 ರೂ. ಇದ್ದ 14.2ಕೆ.ಜಿ ಸಿಲಿಂಡರ್‌ನ ದರ ಸೋಮವಾರ ಬೆಳಿಗ್ಗೆ 12ರಿಂದ 769 ರೂ.ಗೆ ಏರಿಕೆಯಾಗಲಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 88.41 ರೂ. ತಲುಪಿದ್ದರೆ, ಡೀಸೆಲ್ ದರ 78.74 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.93 ರೂ. ಹಾಗೂ ಡೀಸೆಲ್ 85.70 ರೂ. ಇದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹91.09 ಆಗಿದ್ದು, ಡೀಸೆಲ್ ದರ ಪ್ರತಿ ಲೀಟರ್‌ಗೆ ₹83.09 ಆಗಿದೆ.
PublicNext
14/02/2021 10:54 pm