ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರು ಮಾಲೀಕರೇ ಎಚ್ಚರ, ಮುಂದಿನ ವರ್ಷದಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ!

ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಅಕ್ಟೋಬರ್ 2023ರಿಂದ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಮೋಟಾರು ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ಕಾರಿನ ದರ ಮತ್ತು ರೂಪಾಂತರಗಳು ಮುಖ್ಯವಲ್ಲ,' ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಆಟೋ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿ ನಿರ್ಬಂಧಗಳು ಮತ್ತು ಸ್ಥೂಲ ಆರ್ಥಿಕ ಸನ್ನಿವೇಶದ ಮೇಲೆ ಇದರ ಪ್ರಭಾವವನ್ನು ಪರಿಗಣಿಸಿ, ಪ್ರಯಾಣಿಕರ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಅಕ್ಟೋಬರ್ 1, 2023ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ, ಎಂದು ಹೇಳಿದ್ದಾರೆ.

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದ ನಂತರ ತಜ್ಞರು ಮತ್ತು ವಿಮರ್ಶಕರು ಸಾರಿಗೆ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಲೋಪ ದೋಷವನ್ನು ಎತ್ತಿ ತೋರಿಸಿದ್ದರು. ಅಪಘಾತ ಪರಿಣಾಮ ತೀವ್ರವಾಗಿತ್ತು. ಹೀಗಾಗಿ ಮುಂಭಾಗದ ಸೀಟುಗಳಲ್ಲಿದ್ದ ಏರ್‌ಬ್ಯಾಗ್‌ಗಳು ತೆರೆದಿದ್ದರೆ, ಸೀಟ್‌ಬೆಲ್ಟ್‌ಗಳನ್ನು ಹಾಕದ ಕಾರಣ ಹಿಂಬದಿಯಲ್ಲಿದ್ದ ಏರ್‌ಬ್ಯಾಗ್‌ಗಳು ತೆರೆದಿರಲಿಲ್ಲ. ಇದಾದ ಬೆನ್ನಿಗೆ ಸೀಟ್‌ಬೆಲ್ಟ್‌, ಏರ್‌ಬ್ಯಾಗ್‌ಗಳ ಬಗ್ಗೆ ತೀವ್ರ ಚರ್ಚೆ ಆರಂಭವಾಗಿತ್ತು.

ಕಾರು ಪ್ರಯಾಣಿಕರ ಸೀಟ್‌ಬೆಲ್ಟ್‌ ನಿಯಮಗಳ ಬಗ್ಗೆ ಜನರಲ್ಲಿ ಇನ್ನೂ ಅರಿವು ಇಲ್ಲದೇ ಇದ್ದಾಗಲೂ ಸೆಪ್ಟೆಂಬರ್‌ನಲ್ಲಿ ಸರ್ಕಾರವು ಕಾರಿನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ಅನ್ನು ಕಡ್ಡಾಯಗೊಳಿಸಿತ್ತು. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡದೊಂದಿಗೆ ಶಿಕ್ಷೆ ವಿಧಿಸುವ ನಿಯಮ ಜಾರಿಯಲ್ಲಿದೆ.

Edited By : Abhishek Kamoji
PublicNext

PublicNext

29/09/2022 06:37 pm

Cinque Terre

216.83 K

Cinque Terre

6