ಬೆಂಗಳೂರು: ಕೃಷಿಯೇತರ ಭೂಮಿಯಾಗಿ ಪರಿವರ್ತಿತವಾಗದ ಜಾಗದಲ್ಲಿಮೇಲೆ ಮನೆ ಕಟ್ಟುವ ಅನುಮತಿ ಯಾರಿಗೂ ಇಲ್ಲ. ಕಾರಣ ಅದು ಕಂದಾಯ ಭೂಮಿಯಾಗಿರುತ್ತದೆ. ರಾಜ್ಯ ಸರ್ಕಾರ ರೆವೆನ್ಯೂ ಸೈಟ್ ಮಲೆ ಮನೆ ಕಟ್ಟಲು ನಿರ್ಬಂಧ ವಿಧಿಸಿದೆ.
ವಾಸಕ್ಕೊಂದು ಮನೆ ಇದ್ದರೆ ಸಾಕೆಂಬ ಭರದಲ್ಲಿ ಲಕ್ಷಾಂತರ ಮಂದಿ ರೆವಿನ್ಯೂ ಸೈಟ್ ಖರೀದಿಸಿದ್ದಾರೆ. ಇದ್ದದ್ದರಲ್ಲಿ ಕಡಿಮೆ ದರಕ್ಕೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಸೈಟು ಖರೀದಿಸಿದವರಿಗೆ ಈಗ ನೋಂದಣಿ ಸಮಸ್ಯೆ ಎದುರಾಗಿದೆ. ಅವರಿಗೆ ಮನೆ ಕಟ್ಟಲೂ ಅನುಮತಿಯೂ ಸಿಗುತ್ತಿಲ್ಲ, ಮಾರಾಟಕ್ಕೆ ನೋಂದಣಿಯೂ ಆಗುತ್ತಿಲ್ಲ. ಹೀಗಾಗಿ ಸರಕಾರ ಲಕ್ಷಾಂತರ ಜನರಿಗೆ ದಾಖಲೆಗೆ ಅನುವು ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬಿಡಿಎ ಅಥವಾ ಕೆಎಚ್‌ಬಿ ಸೈಟ್ ಎಲ್ಲರಿಗೂ ಸಿಗದು. ಹೀಗಾಗಿ ಜನ ಖಾಸಗಿ ಡೆವಲಪರ್‌ಗಳಿಂದ ನಿವೇಶನ ಖರೀದಿಸಿ ತೊಂದರೆಗೆ ಸಿಲುಕಿದ್ದಾರೆ. ಈ ಬಡಾವಣೆ ನಿರ್ಮಾಣ ಮಾಡುವಾಗ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ ಮಾಡಿಲ್ಲ. ಇದೇ ಕಾರಣಕ್ಕೆ ಬಡಾವಣೆಗೆ ಮಂಜೂರಾತಿಯೂ ಸಿಕ್ಕಿಲ್ಲ. ಇಂಥ ಬಡಾವಣೆಗಳನ್ನು ಅಕ್ರಮ ಎಂದು ಕಂದಾಯ ಇಲಾಖೆ ಗುರುತಿಸಿ ಕ್ರಮ ತೆಗೆದುಕೊಳ್ಳಬೇಕು. ಆದರೆ ಲಂಚ ಪಡೆದು ಬಡಾವಣೆ ನಿರ್ಮಾಣಕ್ಕೆ ಪರೋಕ್ಷವಾಗಿ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಾರೆ. ಅಂಥ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ಈಗ ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗಿದೆ. ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ 10 ಲಕ್ಷಕ್ಕೂ ಅಧಿಕ ರೆವಿನ್ಯೂ ಸೈಟ್‌ಗಳು ಮಾರಾಟಗೊಂಡಿವೆ. ಅವುಗಳಿಗೆ ಈಗ ಖಾತೆ ಸಿಕ್ಕಿಲ್ಲ.
ರೆವಿನ್ಯೂ ಸೈಟ್‌ಗಳಲ್ಲಿ ಮನೆ ಕಟ್ಟಲು ಬ್ಯಾಂಕ್ ಸಾಲವೂ ಸಿಗುತ್ತಿಲ್ಲ. ಮರು ಖರೀದಿಗೂ ಖಾಸಗಿ ಬ್ಯಾಂಕ್‌ಗಳು ನಿರಾಕರಿಸಿವೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸೈಟ್ ಮಾರೋಣ ಎಂದರೂ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂಬುದು ರೆವಿನ್ಯೂ ಸೈಟ್ ಖರೀದಿಸಿದವರ ಅಳಲಾಗಿದೆ.
PublicNext
14/12/2020 07:35 am