ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೋಂದಣಿ ರದ್ದಾಗಬಾರದು ಎಂದಾದರೆ ಇಂದೇ ಜಿಎಸ್ ಟಿಆರ್-3ಬಿ ವಿವರ ಸಲ್ಲಿಸಿ

ಬೆಂಗಳೂರು: ಹೆಚ್ಚಿನ ಉದ್ದಿಮೆಗಳು 'ಶೂನ್ಯ ಜಿಎಸ್ ಟಿ ತೆರಿಗೆ ವಿವರ'ಗಳನ್ನು ಫಾರ್ಮ್ ಜಿಎಸ್ ಟಿಆರ್-3ಬಿ ಮೂಲಕ ಸಲ್ಲಿಸಿಲ್ಲ.

ಈ ವಿವರ ಸಲ್ಲಿಸಲು ವಿಳಂಬ ಮಾಡಿದ್ದಕ್ಕೆ ಪ್ರತ್ಯೇಕ ಶುಲ್ಕವನ್ನೂ ಪಾವತಿಸಬೇಕು.

ಹಾಗಾಗಿ ಈಗ ಉದ್ಯಮಗಳು ತಮ್ಮ ಜಿಎಸ್ ಟಿ ನೋಂದಣಿ ರದ್ದಾಗುವ ಹಾಗೂ ವಹಿವಾಟು ಸ್ಥಗಿತಗೊಳ್ಳುವ ಅಪಾಯದಲ್ಲಿವೆ.

ನೋಂದಣಿ ರದ್ದಾಗಬಾರದು ಎಂದಾದರೆ ನವೆಂಬರ್ 30ರೊಳಗೆ ಜಿಎಸ್ ಟಿಆರ್-3ಬಿ ವಿವರ ಸಲ್ಲಿಸಬೇಕು ಎಂದು ಸರ್ಕಾರ ಗಡುವು ನೀಡಿದೆ.

ಜಿಎಸ್ ಟಿ ನೋಂದಣಿ ರದ್ದಾದರೆ ಇ-ವೇ ಬಿಲ್ ಸಿಗುವುದಿಲ್ಲ.

ಆಗ ವಹಿವಾಟು ನಡೆಸಲು ಆಗುವುದಿಲ್ಲ ಎಂದು ಮೂಲಗಳು ಎಚ್ಚರಿಕೆ ನೀಡಿವೆ.

ರಾಜ್ಯದಲ್ಲಿ ಒಟ್ಟು 8.88 ಲಕ್ಷ ಉದ್ಯಮಗಳು ಜಿಎಸ್ ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಸಿಕೊಂಡಿವೆ.

ಈ ಪೈಕಿ ಶೇಕಡ 78ರಷ್ಟು ಉದ್ದಿಮೆಗಳು ಅಕ್ಟೋಬರ್ ಅಂತ್ಯದ ವೇಳೆಗೆ ಜಿಎಸ್ ಟಿ ವಿವರ ಸಲ್ಲಿಸಿವೆ.

ನವೆಂಬರ್ 16ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಡಿಸೆಂಬರ್ 1ಕ್ಕೂ ಮೊದಲು ಜಿಎಸ್ ಟಿಆರ್-3ಬಿ ಶೂನ್ಯ ತೆರಿಗೆ ವಿವರಗಳನ್ನು ವಿಳಂಬ ಶುಲ್ಕದ ಜೊತೆ ಸಲ್ಲಿಸಬೇಕು.

ಈ ಕೆಲಸ ಮಾಡದ ಉದ್ದಿಮೆಗಳಿಗೆ ಇ-ವೇ ಬಿಲ್ ಸಿಗುವುದಿಲ್ಲ.

ಇ-ವೇ ಬಿಲ್ ಇಲ್ಲದಿದ್ದರೆ ಉತ್ಪನ್ನಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಸಾಧ್ಯವಿಲ್ಲ.

Edited By : Nirmala Aralikatti
PublicNext

PublicNext

30/11/2020 07:26 am

Cinque Terre

59.06 K

Cinque Terre

1