ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ಭಾರತ ಅಷ್ಟೇ ಅಲ್ಲದೆ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅನೇಕರು ಬ್ಯಾಂಕ್ಗಳಿಂದ ತೆಗೆದುಕೊಂಡಿರುವ ಸಾಲದ ಇಐಎಂ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅಂಥವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖುಷಿ ಸುದ್ದಿಯನ್ನು ನೀಡಿದೆ.
ಗ್ರಾಹಕರು ಕಟ್ಟಬೇಕಿರುವ ಇಎಂಐ ಅವಧಿಯನ್ನು ಎಸ್‌ಬಿಐ 24 ತಿಂಗಳವರೆಗೆ ವಿಸ್ತಾರ ಮಾಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದಕ್ಕಾಗಿ ಹೊಸದೊಂದು ಪೋರ್ಟಲ್ ತೆರೆಯಲಾಗಿದ್ದು, ಅಲ್ಲಿ ನೀವು ಈ ಸೌಲಭ್ಯದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಷರತ್ತುಗಳು: ಇದಕ್ಕಾಗಿ ಮೊದಲು ಡಿಸೆಂಬರ್ 24ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಗ್ರಾಹಕರು 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲ ಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರಬೇಕು. ಎರಡು ವರ್ಷದ ಅವಧಿ ಮುಗಿದ ಮೇಲೆ 0.35 ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
PublicNext
22/09/2020 04:18 pm