ಕೊರೋನಾ ವೈರಸ್ ಹಿನ್ನಲೆ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು, ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು.
ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.
ಬುಧವಾರ ಆಭರಣ ಚಿನ್ನ 10 ಗ್ರಾಂಗೆ 550 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಲೆ 47,500 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ ಚಿನ್ನದ ದರ 610 ರೂಪಾಯಿ ಇಳಿಕೆ ಕಾಣುವ ಮೂಲಕ 51,810 ರೂಪಾಯಿ ಆಗಿದೆ.
ಇನ್ನು ಬೆಳ್ಳಿ ಬೆಲೆಯಲ್ಲಿ ಬಾರಿ ಇಳಿಕೆ ಕಂಡಿದೆ, ಕೆಜಿ ಬೆಳ್ಳಿಗೆ 70 ಸಾವಿರದ ಗಡಿ ದಾಟಿತ್ತು. ಬುಧವಾರ ದಾಖಲೆಯ ಮೊತ್ತದಲ್ಲಿ ಬೆಳ್ಳಿ ಬೆಲೆ ಇಳಿಕೆ ಕಂಡಿದೆ. ಬೆಳ್ಳಿ ದರ ಒಂದು ಕೆಜಿಗೆ 1600 ರೂಪಾಯಿ ಇಳಿಕೆ ಕಂಡಿದ್ದು, 59,000 ರೂಪಾಯಿ ಆಗಿದೆ.
ಚಿನ್ನದ ದರ ಇಳಿಕೆ ಕಾಣುತ್ತಿರುವುದು ಆಭರಣ ಪ್ರಿಯರಿಗೆ ಸಂತಸ ಮೂಡಿಸಿದೆ.
PublicNext
24/09/2020 08:01 pm