ಲಕ್ನೋ: ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಉತ್ತರ ಪ್ರದೇಶದ ಮೂಲದ ಶ್ರೀನಿವಾಸ್ ದೇಶಪಾಂಡೆ ಅವರ ಪುತ್ರ ಅಮೆರಿಕದ ಬೋಸ್ಟನ್‌ನಲ್ಲಿ ನೆಲೆಸಿರುವ ಉದ್ಯಮಿ ದೇಶ್ ದೇಶಪಾಂಡೆ ಅವರು ಐಐಟಿ ಬಿಹೆಚ್‌ಯು ಫೌಂಡೇಶನ್‌ಗೆ ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ.
ಪತ್ನಿ ಜಯಶ್ರೀ ದೇಶಪಾಂಡೆ ಅವರ ಜೊತೆಗೂಡಿ ಐಐಟಿ ಬಿಹೆಚ್‌ಯು ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದರೂ ತಾವು ವ್ಯಾಸಂಗ ಮಾಡಿದ ವಿಶ್ವವಿದ್ಯಾಲಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ದೇಶ್ ದೇಶಪಾಂಡೆ ಅವರು ತಮ್ಮ ತಂದೆ ಶ್ರೀನಿವಾಸ ದೇಶಪಾಂಡೆ ಅವರ ಸ್ಮರಣಾರ್ಥ ಈ ದೇಣಿಗೆ ನೀಡಿದ್ದಾರೆ.
ದೇಶಪಾಂಡೆ ಅವರು ಐಐಟಿ ಬಿಹೆಚ್‌ಯು ಫೌಂಡೇಶನ್ ಸಂಸ್ಥೆಯ 1948ರ ಬ್ಯಾಚ್‌ನ ಪದವೀಧರರಾಗಿದ್ದಾರೆ. ಸಂಸ್ಥೆಯ ಗ್ರಂಥಾಲಯಕ್ಕೆ ಶ್ರೀನಿವಾಸ್ ದೇಶಪಾಂಡೆ ಅವರ ಹೆಸರಿಟ್ಟು ಗೌರವ ಸೂಚಿಸಲಾಗಿದೆ.
ದೇಶ್ ದೇಶಪಾಂಡೆ ಅವರ ತಂದೆ ಶ್ರೀನಿವಾಸ್ ದೇಶಪಾಂಡೆ ಅವರು 1980ರಲ್ಲಿ ಕರ್ನಾಟಕದಲ್ಲಿ ಜಂಟಿ ಕಾರ್ಮಿಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಹುಬ್ಬಳ್ಳಿಯ ಚಿನ್ಮಯ ಮಿಷನ್ ಅಧ್ಯಕ್ಷ ಹಾಗೂ ಷರೀಫ್ ಟ್ರಸ್ಟ್ನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಬಳಿಕ ಅವರು ದೇಶಪಾಂಡೆ ಫೌಂಡೇಶನ್ ಆರಂಭಿಸಿದ್ದರು.
PublicNext
07/06/2022 12:04 pm