ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ರೈತ ವಿರೋಧಿ ಅಲ್ಲ ಎಂದ ಜಿಯೊ ಕಂಪನಿ

ನವದೆಹಲಿ: ಜಿಯೊ ಕಂಪನಿ ರೈತ ವಿರೋಧಿ ಅಲ್ಲವೇ ಅಲ್ಲ. ನಮ್ಮ ಕಂಪನಿಯ ಮೇಲೆ ವ್ಯವಸ್ಥಿತ ಅಪಪ್ರಚಾರ ನಡೆದಿದೆ. ‘ಭಾರತಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾ ಲಿಮಿಟೆಡ್‌ (ವಿಐಎಲ್‌) ಸಂಸ್ಥೆಯವರು ನಮ್ಮನ್ನು ರೈತ ವಿರೋಧಿ ಎಂದು ಬಿಂಬಿಸುವ ಕೀಳುಮಟ್ಟದ ಅಭಿಯಾನ ಕೈ ಹಾಕಿದ್ದಾರೆ. ಜಿಯೊ ಸಂಖ್ಯೆಯನ್ನು ತಮ್ಮ ನೆಟ್‌ವರ್ಕ್‌ಗೆ ‘ಪೋರ್ಟ್‌’ ಮಾಡಿಕೊಂಡರೆ ಅದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದಂತಾಗುತ್ತದೆ ಎಂದು ಪ್ರಚೋದಿಸುತ್ತಿದ್ದಾರೆ’ ಎಂದು ರಿಲಯನ್ಸ್‌ ಜಿಯೊ ಸೋಮವಾರ ಆರೋಪಿಸಿದೆ.

ಇದರ ವಿರುದ್ಧ ಜಿಯೊ ಕಂಪನಿಯು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್‌) ದೂರು ನೀಡಿದೆ. ಈ ಎರಡು ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಜಿಯೊ ಕಂಪನಿ ಮಾಡಿರುವ ಈ ಆರೋಪವನ್ನು ಏರ್‌ಟೆಲ್‌ ಹಾಗೂ ವೊಡಾಫೋನ್‌ ಸಂಸ್ಥೆಗಳು ಅಲ್ಲಗಳೆದಿವೆ.

Edited By : Nagaraj Tulugeri
PublicNext

PublicNext

15/12/2020 09:24 am

Cinque Terre

59.79 K

Cinque Terre

6