ನವದೆಹಲಿ: ವಿಶ್ವದ ಪ್ರಮುಖ ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್ ತನ್ನ ಮೊಬೈಲ್ ಮತ್ತು ಐಟಿ ಡಿಸ್ಪ್ಲೇ ನಿರ್ಮಾಣ ಘಟಕವನ್ನು ಚೀನಾದಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು. ಈ ವೇಳೆ ರಾಜ್ಯದಲ್ಲಿ ಸ್ಯಾಮ್ಸಂಗ್ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ 4,825 ಕೋಟಿ ರೂಪಾಯಿ ಹೂಡಿಕೆ ಮಾಡಲು ಸ್ಯಾಮ್ಸಂಗ್ ಕಂಪೆನಿ ಮುಂದಾಗಿದೆ. ಈ ಘಟಕ ಸ್ಥಾಪನೆಯಿಂದ ನೇರವಾಗಿ 510 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಇದಲ್ಲದೆ ನೂರಾರು ಮಂದಿಗೆ ಪರೋಕ್ಷವಾಗಿ ಕೆಲಸ ದೊರೆಯಲಿದೆ ಎಂದು ಸರ್ಕಾರ ಹೇಳಿದೆ.
ಈಗಾಗಲೇ ಸ್ಯಾಮ್ಸಂಗ್ ನೋಯ್ಡಾದಲ್ಲಿ ಮೊಬೈಲ್ ತಯಾರಿಕಾ ಘಟಕವನ್ನು ಹೊಂದಿದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟನೆ ಮಾಡಿದ್ದರು. ಈಗ ಚೀನಾದಲ್ಲಿರುವ ಡಿಸ್ಪ್ಲೇ ತಯಾರಿಕಾ ಘಟಕ ಭಾರತಕ್ಕೆ ಶಿಫ್ಟ್ ಆಗಲಿದೆ.
PublicNext
12/12/2020 11:14 pm