ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನ,ಬೆಳ್ಳಿ ಕೊಳ್ಳುವವರ ಮುಖದಲ್ಲಿ ಮಂದಹಾಸ : ಬೆಲೆಯಲ್ಲಿ ಭಾರೀ ಇಳಿಕೆ

ನವದೆಹಲಿ: ಕೊರೊನಾ ಕಂಟಕದ ಮಧ್ಯೆಯೂ ಮದುವೆ ಸೇರಿ ಎಲ್ಲ ಸಭೆ ಸಮಾರಂಭಗಳು ನಡೆಯುತ್ತಿವೆ.

ಇಂತಹ ಕಾರ್ಯಕ್ರಮಗಳಲ್ಲಿ ಚಿನ್ನ ಕೊಳ್ಳುವುದು ಅನಿವಾರ್ಯವಾಗಿತ್ತು. ಬೆಲೆ ಗಗನಕುಸುಮವಾಗಿದ್ದರಿಂದ ಜನ ಚಿನ್ನ ಕೊಳ್ಳಲು ಸಾಕಸ್ಟು ಹೆಣಗಾಡುತ್ತಿದ್ದರು.

ಇಂದಿನ ಚಿನ್ನದ ದರದಲ್ಲಿ ಇಳಿಕೆಯಾದ ಕಾರಣ ಚಿನ್ನ ಕೊಳ್ಳುವವರ ಮುಖದಲ್ಲಿ ಮಂದಹಾಸ ಮೂಡಿದೆ.

ಹೌದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಮೇಲೆ 900 ರುಪಾಯಿ ಇಳಿಕೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆ 48,250 ರುಪಾಯಿಗೆ ತಲುಪಿದೆ.

ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 980 ರುಪಾಯಿ ಇಳಿಕೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆಯಲ್ಲಿ 52,630 ರುಪಾಯಿಗೆ ತಲುಪಿದೆ ಎಂದು ಎಚ್ ಡಿಎಫ್ ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ 900 ರುಪಾಯಿ ಇಳಿಕೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆ 46,200 ರುಪಾಯಿಗೆ ತಲುಪಿದೆ.

ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 980 ರುಪಾಯಿ ಇಳಿಕೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆಯಲ್ಲಿ 50,400 ರುಪಾಯಿಗೆ ತಲುಪಿದೆ.

ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡಿದೆ. 1,588 ರುಪಾಯಿ ಇಳಿಕೆಯಾಗಿದ್ದು 1 ಕೆಜಿ ಬೆಳ್ಳಿಯ ಬೆಲೆ 59,301 ರುಪಾಯಿಗೆ ತಲುಪಿದೆ.

Edited By : Nirmala Aralikatti
PublicNext

PublicNext

24/11/2020 07:15 pm

Cinque Terre

33.02 K

Cinque Terre

0

ಸಂಬಂಧಿತ ಸುದ್ದಿ