ಹೈದರಾಬಾದ್: ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಟೊಮೆಟೊಗಳ ಸರಾಸರಿ ಮಾರಾಟ ಬೆಲೆ 20-30 ರೂ. ಇದೆ. ಆದರೆ ರೈತರಿಗೆ ಸಿಗುತ್ತಿರುವ ದರ!
ಒಂದೆಡೆ ಕೇಂದ್ರದ ಎಪಿಎಂಸಿ ಬಿಲ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರಿಗೆ ಸ್ಪರ್ಧಾತ್ಮಕ ದರ ದೊರೆಯಬೇಕು ಎಂದು ಭಾಷಣಗಳು ಬರುತ್ತಿವೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ಟೊಮೆಟೊ ಬೆಳೆದ ರೈತರ ಪಾಡು ಯಾರಿಗೂ ಬೇಡ.
ಪಾತಿಕೊಂಡ ಕೃಷಿ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ರೈತರಿಂದ ಟೊಮೆಟೊವನ್ನು ಪ್ರತಿ ಕೆ.ಜಿ.ಗೆ 10 ಪೈಸೆ ದರದಲ್ಲಿ ಖರೀದಿ ಮಾಡಲಾಗಿದೆ! ಟೊಮೆಟೊ ಬೆಳೆದ ರೈತರಿಗೆ ಆದ ನಷ್ಟವನ್ನು ಸರಿದೂಗಿಸುವವರು ಯಾರು ಎಂದು ರೈತ ಮುಖಂಡರು ಪ್ರಶ್ನೆ ಮಾಡಿದ್ದಾರೆ.
ಟೊಮೆಟೊದ ಬೆಲೆ 30 ಪೈಸೆಗಿಂತ ಕಡಿಮೆಯಾದ ನಂತರ ರಾಯಲಸೀಮಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (APMC) ಮಾರುಕಟ್ಟೆಯ ಆಡಳಿತದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಈಗ ದರ ಮತ್ತಷ್ಟು ಕುಸಿದಿದ್ದು ಚರ್ಚೆ ಮಾಡಲೇಬೇಕಾದ ಸಂಗತಿಯಾಗಿದೆ.
PublicNext
04/01/2021 09:43 pm