ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಟಿ ರಿಟರ್ನ್ಸ್ ಹಾಗೂ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಗೆ ಮತ್ತೊಮ್ಮೆ ಅವಧಿ ವಿಸ್ತರಣೆ

ನವದೆಹಲಿ- ಕೊರೋನಾ ಸಂಕಷ್ಟ ಕಾಲದಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ವರ್ಷದ ಕೊನೆವರೆಗೆ ಅಂದ್ರೆ ಡಿಸೆಂಬರ್ ೩೧ರವರೆಗೆ ಅವಕಾಶ ನೀಡಲಾಗಿದೆ. ಕೊರೋನಾ ತಂದಿಟ್ಟ ನಷ್ಟದಲ್ಲಿರುವವರಿಗೆ ಇದು ಕೊಂಚ ರಿಲೀಫ್ ಕೊಟ್ಟಂತಾಗಿದೆ.

ಕೊರೋನಾ ಅಥವಾ ಯಾವುದೇ ಸಾಂಕ್ರಾಮಿಕ ರೋಗ ಬಾರದೇ ಈ ವರ್ಷ ಸಹಜವಾಗಿದ್ದರೆ ಈ ತೆರಿಗೆ ಪಾವತಿಯಲ್ಲಿ ಯಾವುದೇ ಸಡಿಲಿಕೆ ಸಿಗುತ್ತಿರಲಿಲ್ಲ‌. ಈ ನಡುವೆ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಆದಾಯ ತೆರಿಗೆ ಪಾವತಿಗೆ ನವೆಂಬರ್ 30 ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು. ಈಗ ಉದ್ಯಮ ಕ್ಷೇತ್ರದ ಸವಾಲುಗಳನ್ನು ಪರಿಶೀಲಿಸಿ ತೆರಿಗೆ ಪಾವತಿಗೆ ಮತ್ತೊಮ್ಮೆ ದಿನಾಂಕ ಸಡಿಲಿಕೆ ಮಾಡಲಾಗಿದೆ.

ಡಿಸೆಂಬರ್ 31ರೊಳಗಾಗಿ ಆದಾಯ ತೆರಿಗೆ ಪಾವತಿಸದಿದ್ದರೆ ಬಡ್ಡಿ ಹೇರಿಕೆ ಮಾಡಲಾಗುವುದು ಎಂದು ಸಿಬಿಡಿಟಿ ಎಚ್ಚರಿಕೆ ನೀಡಿದೆ.

Edited By : Nagaraj Tulugeri
PublicNext

PublicNext

25/10/2020 07:54 am

Cinque Terre

78.83 K

Cinque Terre

0