ಮುಂಬೈ: ಷೇರು ಮಾರಾಟದಲ್ಲಿ ಇಂದು ಭಾರೀ ಕುಸಿತ ಕಂಡಿದ್ದು, ಒಂದೇ ದಿನದಲ್ಲಿ ಹೂಡಿಕೆ ದಾರರಿಗೆ 2.7 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಐಟಿ ಮತ್ತು ಹಣಕಾಸಿಗೆ ಸಂಬಂಧಪಟ್ಟ ಶೇರು ಮಾರಾಟ ತೀವ್ರ ಕಡಿಮೆ ವಹಿವಾಟು ನಡೆಸಿದ ಪರಿಣಾಮ, ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 1,0,66.33 ಅಂಕಗಳಷ್ಟು ಕುಸಿತ ಕಂಡಿದ್ದು, 39, 728.41 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 290.70 ಅಂಕಗಳಷ್ಟು ಕುಸಿತ ಕಂಡಿದ್ದು, 11,680.35 ಅಂಕಗಳ ವಹಿವಾಟಿ ನೊಂದಿಗೆ ಮುಕ್ತಾಯ ಕಂಡಿದೆ.
ಅಮೆರಿಕ ವಿಶ್ವ ಆರ್ಥಿಕ ನೀತಿಯನ್ನು ಮುನ್ನಡೆಸುವ ಮುಂಚೂಣಿ ಸ್ಥಾನದಲ್ಲಿದೆ. ಆದರೆ ಅಮೆರಿಕದ ಆಂತರಿಕ ರಾಜಕೀಯದಿಂದಾಗಿ ಪ್ಯಾಕೇಜ್ ಘೋಷಣೆ ವಿಳಂಬವಾಗಿದೆ.
PublicNext
15/10/2020 06:30 pm