", "articleSection": "Politics,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/229640-1736529280-vij.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ನಕ್ಸಲರಿಗೆ ಸರ್ಕಾರ ಶರಣಾಗತಿ ಆಗಿದೆಯೋ? ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೋ? ನಕ್ಸಲರು ಶರಣಾಗಿದ್ದರೇ ಕಂಡಿಷನ್ ಹಾಕುತ್ತಿರಲಿಲ್ಲ ...Read more" } ", "keywords": "Vijayapura, Naxals, Surrender, Karnataka News, Naxal Movement, CT Ravi, BJP Leader, Naxalite Issue, Government Policy, Anti Naxal Operations, Karnataka Politics, Naxal Surrender Policy.,Bijapur,Politics,Law-and-Order,Government", "url": "https://publicnext.com/article/nid/Bijapur/Politics/Law-and-Order/Government" }
ವಿಜಯಪುರ: ನಕ್ಸಲರಿಗೆ ಸರ್ಕಾರ ಶರಣಾಗತಿ ಆಗಿದೆಯೋ? ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೋ? ನಕ್ಸಲರು ಶರಣಾಗಿದ್ದರೇ ಕಂಡಿಷನ್ ಹಾಕುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಪ್ರಶ್ನೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದರೆ ನಕ್ಸಲರು ಬಳಸುವ ಆಯುಧಗಳನ್ನು ಒಪ್ಪಿಸಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಈವರೆಗೂ ಅವರ ಬಳಿಯಿರುವ ಎಕೆ -47,ಎಕೆ-56, ಬಾಂಬ್ ಸೇರಿದಂತೆ ಯಾವುದನ್ನೂ ಕೊಟ್ಟಿಲ್ಲ. ನಕ್ಸಲರು ಕಂಡಿಷನ್ ಹಾಕುತ್ತಿದ್ದಾರೆ. ಶರಣಾಗಿರೋದು ನಕ್ಸಲರೋ, ನಕ್ಸಲರಿಗೆ ಸರ್ಕಾರ ಶರಣಾಗಿದೆಯೋ? ಸಿದ್ದರಾಮಯ್ಯನವರ ಸಾಫ್ಟವೇರ್ ನ ಅರ್ಬನ್ ನಕ್ಸಲರು ಡಿಕ್ಟೇಟ್ ಮಾಡ್ತಾರೆ.
ಸಿದ್ದರಾಮಯ್ಯರ ಒಡ್ಡೋಲಗದಲ್ಲಿ ಮಾನಿಟರ್ ಮಾಡುವರು ಅರ್ಬನ್ ನಕ್ಸಲರಿದ್ದಾರೆ. ನಕ್ಸಲರಿಗೆ ಶರಣಾಗಿಲ್ಲ ಎಂದರೆ ಅವರಿಗೆ ನೆರವು ಕೊಡುತ್ತಿದ್ದವರು ಯಾರು ಅಂತ ಪತ್ತೆ ಹಚ್ಚಬೇಕು, ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಬೇಕು . ನೆರವು ಕೊಡ್ತಿದ್ದವರನ್ನು ಬಂಧಿಸಬೇಕು. ಕಾನೂನು ಕ್ರಮ ಆಗಬೇಕು. ಹೀಗಾದರೆ ಮಾತ್ರ ನಕ್ಸಲರು ಶರಣಾಗಿದ್ದಾರೆ ಅಂತ ಭಾವಿಸಬೇಕು. ಇಲ್ಲದೇ ಇದ್ದರೆ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗಿದ್ದಾರೆ ಅಂತ ಭಾವಿಸಬೇಕಾಗುತ್ತದೆ.
ವಿಕ್ರಂಗೌಡ ಹತ್ಯೆ ವಿಚಾರ, ನಕ್ಸಲರ ದಾರಿ ತಪ್ಪು,ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿದೆ. ನಕ್ಸಲರು ನೆರವು ಪಡೆಯುತ್ತಿರೋದು ರಾಷ್ಟ್ರ ವಿರೋಧಿಗಳಿಂದ. ಚೀನಾ , ಪಾಕಿಸ್ತಾನ ಐಎಸ್ಐನಿಂದ ನೆರವು ಪಡೆಯುತ್ತಾರೆ. ಅವರನ್ನು ದೇಶಭಕ್ತರು ಅಂತ ಸನ್ಮಾನ ಮಾಡೋಕೆ ಆಗುತ್ತಾ? ಅವರ ವಿಚಾರ ಒಳ್ಳೆಯದು ಅಂತ ಒಪ್ಪಿಕೊಳ್ಳಲು ಆಗುತ್ತಾ? ಸಂವಿಧಾನ ವಿರೋಧಿ, ರಾಷ್ಟ್ರ ಘಾತುಕ ಆಗಿರುವ ನಕ್ಸಲರ ವಿಚಾರಧಾರೆ ತಪ್ಪು. ಅವರ ವಿಚಾರಧಾರೆಗೆ ನಗರದಲ್ಲಿದ್ದು ಬೆಂಬಲಿಸುವವರು ಅಪರಾಧಿಗಳೇ. ಕಾಡಿನಲ್ಲಿ ಬಂದೂಕು ಹಿಡಿದುಕೊಂಡು ಓಡಾಡುವವರು ಮಾತ್ರ ನಕ್ಸಲರಲ್ಲ. ನಗರದಲ್ಲಿದ್ದು ಬೆಂಬಲಿಸುವವರು ಅಪರಾಧಿಗಳೇ, ನಕ್ಸಲರ ವಿಚಾರ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
PublicNext
10/01/2025 10:45 pm