", "articleSection": "Politics,Health & Fitness,Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/229640-1736530054-bijop.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಕರ್ನಾಟಕ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು ನಿಂತಿಲ್ಲ. ಹಸುಗೂಸಿನ ಸಾವಿನ ಕಾರಣ ಇನ್ನೂವರೆಗೂ ಪತ್ತೆಯಾಗಿಲ್ಲ. ಒಂದೂವರೆ ವರ್ಷದಲ್ಲ...Read more" } ", "keywords": "Vijayapura, Karnataka, Death Trap, CT Ravi, Serious Allegations, Karnataka News, Indian Politics, BJP Leader, Vijayapura City, Karnataka Government, Public Safety, Infrastructure Development.,Bijapur,Politics,Health-and-Fitness,Crime,Law-and-Order,Government", "url": "https://publicnext.com/article/nid/Bijapur/Politics/Health-and-Fitness/Crime/Law-and-Order/Government" }
ವಿಜಯಪುರ: ಕರ್ನಾಟಕ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು ನಿಂತಿಲ್ಲ. ಹಸುಗೂಸಿನ ಸಾವಿನ ಕಾರಣ ಇನ್ನೂವರೆಗೂ ಪತ್ತೆಯಾಗಿಲ್ಲ. ಒಂದೂವರೆ ವರ್ಷದಲ್ಲಿ 2,800 ಕ್ಕೂ ಅಧಿಕ ರೈತರು ಸಾವನಪ್ಪಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರ್ನಾಟಕ ಸಾವಿನ ಮನೆಯಾದರೂ ಕಾಂಗ್ರೆಸ್ ಕಲ್ಲು ಹೃದಯ ಹೊಂದಿದ ಹಾಗೆ ಸಂವೇದನೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸನವರು ಡಿನ್ನರ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಸ್ವಲ್ಪವಾದರೂ ಕರುಣೆ ಇದ್ದರೆ ಬಡ ಬಾಣಂತಿಯರ ಸಾವಿಗೆ ಕಾರಣ ಪತ್ತೆ ಹಚ್ಚಬೇಕಿದೆ. ಸಾವಿಗೆ ಕಾರಣ ಪತ್ತೆ ಹಚ್ಚಲು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸತ್ತಿರುವವರೆಲ್ಲರೂ ಬಡವರು, ದಲಿತರು ಹಣದ ದಾಹಕ್ಕೆ ಒಳಗಾಗಿ ವೈದ್ಯರೇನಾದರೂ ನಿರ್ಲಕ್ಷ್ಯ ಮಾಡಿದ್ದಾರಾ? ಎಂಬುದರ ತನಿಖೆಯಾಗಬೇಕು ಒಂದು ವಾರದೊಳಗೆ ಕಮಿಟಿ ರಚನೆ ಮಾಡಬೇಕು. ಡಿನ್ನರ್ ಪಾಲಿಟಿಕ್ಸ್ ಆಮೇಲೆ ಬೇಕಾದರೆ ಮಾಡಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.
PublicNext
10/01/2025 10:57 pm