ವಿಜಯಪುರ : ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ರಮೇಶ ಜಿಗಜಿಣಗಿ ತಪ್ಪು ಮಾಡಿದ್ದಾರೆ ಅದಕ್ಕೆ ಮುಡಾ ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿಎಂ ಯಾಕೆ ಸೈಟ್ ತಗೋಬೇಕಿತ್ತು
ರಾಮಕೃಷ್ಣ ಹೆಗಡೆಯವರಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾನು ಹಿಂದೆನೇ ಸಿದ್ದರಾಮಯ್ಯ ರಾಜೀನಾಮೆ ಕೊಡೊದು ಯೋಗ್ಯ ಎಂದು ಹೇಳಿದ್ದೆ ಸೈಟ್ ತಗೊಂಡ ಮೇಲೆ ವಾಪಸ್ ಯಾಕೆ ಕೊಡಬೇಕು ಸಿದ್ದರಾಮಯ್ಯ ಸಲಹೆಯಿಂದಲೆ ಅವರ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ. ನಮ್ಮ ಮನೆಯಲ್ಲಿ ನಾನು ಹೇಳದೆ ನಮ್ಮ ಹೆಂಡತಿ ತೀರ್ಮಾನ ಮಾಡ್ತಾಳಾ..? ಎಂದು ಪ್ರಶ್ನೆ ಮಾಡಿದ ಅವರು
ಇದೆಲ್ಲ ನಾಟಕ ಸಾಕು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕಾರಣ ಗಬ್ಬೆದ್ದು ನಾರುತ್ತಿದೆ. ಎಲ್ಲ ಪಕ್ಷಗಳಲ್ಲು ಇದೆ ಸ್ಥಿತಿ ಇದೆ.ಎಲ್ಲರೂ ಸೇರಿಯೆ ರಾಜಕಾರಣವನ್ನ ಗಬ್ಬು ಹಿಡಿಸಿದ್ದೇವೆ ಎಲ್ಲ ಪಕ್ಷಗಳು ನಿಷ್ಠೆಯಿಂದ ಕೆಲಸ ಮಾಡ್ತೀವೆ, ನಾವು ರಾಜಕಾರಣಿಗಳು ಗಬ್ಬು ಹಿಡಿಸಿದ್ದೇವೆ ಎಂದು ಸದ್ಯ ರಾಜಕೀಯದ ವ್ಯವಸ್ಥೆಯ ಬಗ್ಗೆ ಅಸಮಧಾನ ಹೊರ ಹಾಕಿದರು.
PublicNext
02/10/2024 02:40 pm