", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1736311333-jana.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಗುಮ್ಮಟ ನಗರಿ ವಿಜಯಪುರದ ಮುನೇಶ್ವರ ನಗರ, ಯೋಗಾಪುರ ಕಾಲೋನಿಯಲ್ಲಿ ಚಿರತೆ ಓಡಾಡಿದೆ. ಇನ್ನೂ ಸಿಸಿ ಕ್ಯಾಮೆರಾ ದಲ್ಲಿ ಚಿರತೆ ಓಡಾಡಿರುವ ...Read more" } ", "keywords": "Vijayapura, leopard sighting, Karnataka news, Indian wildlife, leopard in city, Vijayapura city, Gummat nagar, wildlife conservation, leopard attack, India wildlife news, Karnataka current events, Vijayapura news today.,Bijapur,Nature", "url": "https://publicnext.com/article/nid/Bijapur/Nature" } ವಿಜಯಪುರ: ಕಾಡಿನಿಂದ ನಾಡಿಗೆ ಬಂದ ಚಿರತೆ, - ಗುಮ್ಮಟ ನಗರಿ ಜನರಲ್ಲಿ ಆತಂಕ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕಾಡಿನಿಂದ ನಾಡಿಗೆ ಬಂದ ಚಿರತೆ, - ಗುಮ್ಮಟ ನಗರಿ ಜನರಲ್ಲಿ ಆತಂಕ

ವಿಜಯಪುರ: ಗುಮ್ಮಟ ನಗರಿ ವಿಜಯಪುರದ ಮುನೇಶ್ವರ ನಗರ, ಯೋಗಾಪುರ ಕಾಲೋನಿಯಲ್ಲಿ ಚಿರತೆ ಓಡಾಡಿದೆ. ಇನ್ನೂ ಸಿಸಿ ಕ್ಯಾಮೆರಾ ದಲ್ಲಿ ಚಿರತೆ ಓಡಾಡಿರುವ ವಿಡಿಯೋ ಕಂಡ ಮುನೇಶ್ವರ ಬಡಾವಣೆಯ ಜನರು ತಮ್ಮ ವಾಟ್ಸ್ ಗ್ರುಪ್ ಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಿಂದ ಭಯಗೊಂಡ ಬೆಳಿಗ್ಗೆ ಮನೆಯಿಂದ ಹೊರ ಬರಲು ಹೆದರಿದ್ದಾರೆ.

ಬೆಳಿಗ್ಗೆ ವಾಕಿಂಗ್ ಗೆ ಬರಲು ಸಹಿತ ಜನರು ಹೆದರಿ‌ ಮನೆಯಲ್ಲಿಯೇ ಕುಳಿತಿದ್ದಾರೆ. ಈ ವಿಚಾರ ಅರಣ್ಯ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ...

ಇಂದು ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಭಯ ಭೀತರಾಗಿದ್ದರು. ಇನ್ನೂ ಅದೆಷ್ಟೋ ಜನರು ಕೆಲಸಕ್ಕೆ ತೆರಳದೆ ಭಯದಲ್ಲೇ ಮನೆಯಲ್ಲಿ ಕುಳಿತಿದ್ದಾರೆ. ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ....

ಈಗಾಗಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಓಡಾಡಿದ ಸ್ಥಳ, ಸಿಸಿಟಿವಿ ದೃಶ್ಯಾವಳಿಗಳ ಸಂಗ್ರಹ ಮಾಡುತ್ತಿದ್ದಾರೆ. ಚಿರತೆ ಸೆರೆ ಹಿಡಿಯುವ ಮೂಲಕ ಜನರಲ್ಲಿರುವ ಆತಂಕ ದೂರ ಮಾಡಬೇಕು‌ ಎಂಬುದು ಪಬ್ಲಿಕ್ ನೆಕ್ಸ್ಟ ಆಶಯ.

-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ

Edited By : Shivu K
PublicNext

PublicNext

08/01/2025 09:13 am

Cinque Terre

74.21 K

Cinque Terre

0