ವಿಜಯಪುರ ನಗರದ ಗಣಪತಿ ಚೌಕ್ ಗೆ ತಡರಾತ್ರಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ. ಗಣಪತಿ ಚೌಕ್ ನಲ್ಲಿರುವ ಪಂಚಮುಖಿ ಗಣಪತಿ ಮೂರ್ತಿ ಸುತ್ತಲೂ ಗಾಜಿನ ಗ್ಲಾಸ್ ಅಳವಡಿಸಲಾಗಿದೆ. ಕಿಡಿಗೇಡಿಗಳು ಗ್ಲಾಸ್‌ಗೆ ಕಲ್ಲೆಸೆದು ಮೂರ್ತಿಗೆ ಭಂಗ ತರಲು ಯತ್ನಿಸಿದ್ದಾರೆ ಒಂದು ಬದಿ ಗ್ಲಾಸ್ ಚೂರು ಚೂರಾಗಿದ್ದು ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಗಣಪತಿ ಚೌಕ್ ಕಮಿಟಿ ಸದಸ್ಯರು ಕೃತ್ಯ ಎಸಗಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮಂಜು ಕಲಾಲ ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
03/10/2024 03:33 pm