", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1738577935-kadima.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ : ಆತ ಅದೆಷ್ಟೋ ಅಧಿಕಾರಿಗಳಿಗೆ ತಾನೊಬ್ಬ ಲೋಕಾಯುಕ್ತ ಡಿವೈಎಸ್ ಪಿ ಎಂದು ಹೇಳಿಕೊಂಡು ವಂಚನೆ ಮಾಡಿದ್ದ. ಆದರೆ ಆತನ‌ ಟೈಮ್ ಈ ಬಾರಿ ಸರಿಯಾ...Read more" } ", "keywords": "Vijayapura News, Fake Lokayukta DSP, Police Guest, Impersonation Case, Karnataka Crime News, Vijayapura Police, Lokayukta Investigation, Government Official Impersonation,Bijapur,Crime,Law-and-Order", "url": "https://publicnext.com/article/nid/Bijapur/Crime/Law-and-Order" } ವಿಜಯಪುರ: ಪೊಲೀಸರ ಅತಿಥಿಯಾದ ನಕಲಿ ಲೋಕಾಯುಕ್ತ ಡಿವೈಎಸ್ಪಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಪೊಲೀಸರ ಅತಿಥಿಯಾದ ನಕಲಿ ಲೋಕಾಯುಕ್ತ ಡಿವೈಎಸ್ಪಿ

ವಿಜಯಪುರ : ಆತ ಅದೆಷ್ಟೋ ಅಧಿಕಾರಿಗಳಿಗೆ ತಾನೊಬ್ಬ ಲೋಕಾಯುಕ್ತ ಡಿವೈಎಸ್ ಪಿ ಎಂದು ಹೇಳಿಕೊಂಡು ವಂಚನೆ ಮಾಡಿದ್ದ. ಆದರೆ ಆತನ‌ ಟೈಮ್ ಈ ಬಾರಿ ಸರಿಯಾಗಿರಲಿಲ್ಲ ಮತ್ತೊಮ್ಮೆ ಅಧಿಕಾರಿಯೊಬ್ಬರಿಗೆ ಹೆದರಿಸಲು ಹೋಗಿ ತಾನೇ ಪೋಲಿಸರ‌ ಅತಿಥಿಯಾಗಿದ್ದಾನೆ.

ಹೌದು ಈ‌ ಫೋಟೋದಲ್ಲಿ ಕಾಣುತ್ತಿರುವ ಈ ವ್ಯಕ್ತಿಯ ಹೆಸರು ಮುರಿಗೆಪ್ಪ ನಿಂಗಪ್ಪ ಕುಂಬಾರ ಎಂದು. ಇನ್ನೂ ಈತನ‌ ವಯಸ್ಸು 57 ವರ್ಷ. ಈ ವಯಸ್ಸಿನಲ್ಲಿ ಈತ ಮಾಡುವ ಕೆಲಸ ಕೇಳಿದರೆ ಎಂತವರಿಗೂ ಗಾಬರಿಯಾಗುತ್ತೆ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿಯಾದ ಮುರಿಗೆಪ್ಪ ಕುಂಬಾರ ಈತನ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ ಬರೋಬ್ಬರಿ 57 ಪ್ರಕರಣಗಳು ದಾಖಲಾಗಿವೆ.‌ ಈ ಪ್ರಕರಣಗಳ ಪೈಕಿ ಬಹುತೇಕ‌ ಪ್ರಕರಣಗಳು ಮೋಸ, ವಂಚನೆ ಹಾಗೂ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಇನ್ನೂ ಇದೇ ತರಹ ವಿಜಯಪುರ ‌ಜಿಲ್ಲೆಯಲ್ಲಿ ಅಧಿಕಾರಿಯೊಬ್ಬರಿಗೆ ವಂಚನೆ ಮಾಡಲು ಹೋಗಿ ಈಗ ಸ್ವತಃ ‌ತಾನೇ ಪೊಲೀಸರ ಅತಿಥಿಯಾಗಿದ್ದಾನೆ...

ವಿಜಯಪುರ ಜಿಲ್ಲೆಯ ಆಲಮಟ್ಟಿಯ ಕೆಬಿಜೆಎನ್ಎಲ್ ಕಚೇರಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಅಶೋಕ ತಿಪ್ಪಣ್ಣ ಬಿರಾದಾರ ಎಂಬಾತರಿಗೆ ಕರೆ ಮಾಡಿದ ನಕಲಿ ಲೋಕಾಯುಕ್ತ ಡಿ ವೈ ಎಸ್ ಪಿ ಮುರಿಗೆಪ್ಪ ಕುಂಬಾರ, ನಿಮ್ಮ ಮೇಲೆ ದೂರೊಂದು ದಾಖಲಾಗಿದೆ. ಅದರ ವಿಚಾರಣೆಗೆ ಒಳಪಡಿಸಬಾರದು ಎಂದರೆ‌ ಹಣ ಕೊಡಬೇಕು‌ ಎಂದು 70 ಸಾವಿರ ರೂಪಾಯಿಯ ಬೇಡಿಕೆ ಇಟ್ಟಿದ್ದಾನೆ. ಈ ವಿಚಾರವಾಗಿ ಕೆಬಿಜೆಎನ್ಎಲ್ ಅಧಿಕಾರಿ‌ ಅಶೋಕ ಬಿರಾದಾರ್ ‌ಮುದ್ದೇಬಿಹಾಳ ಠಾಣೆಯಲ್ಲಿ‌ ದೂರನ್ನು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಲೊಕಾಯುಕ್ತ ಡಿ ವೈ ಎಸ್ ಪಿ ಮುರಿಗೆಪ್ಪ ಕುಂಬಾರ್ ಗೆ ಬಂಧಿಸಿದ್ದಾರೆ. ಈತನ‌ ಮೇಲೆ ಈಗಾಗಲೇ ಹಲವು ಪ್ರಕರಣ ದಾಖಲಾಗಿದ್ದ ಕಾರಣ ಆತನ ಮೇಲೆ ವಾರಂಟ್ ಕೂಡಾ ಜಾರಿಯಾಗಿತ್ತು. ಇನ್ನೂ ಕೆಲ ಪ್ರಕರಣದಲ್ಲಿ ಆತ ಕೋರ್ಟ್ ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಈಗ ಚಾಣಾಕ್ಷ ತನದಿಂದ ಗುಮ್ಮಟ ನಗರಿ ಪೊಲೀಸರು ಆತನನ್ನು ಬಂಧಿಸುವ ಮೂಲಕ ಜೈಲಿಗಟ್ಟಿದ್ದಾರೆ...

ಮೋಸ ಹೋಗುವವರು ಎಲ್ಲಿವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಆದರೆ ಅಧಿಕಾರಿ ಅಶೋಕ ಬಿರಾದಾರ ಅವರ ಚಾಣಾಕ್ಷತನದ ಫಲವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಈಗ ಹಲವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಮುರಿಗೆಪ್ಪ ಕುಂಬಾರ ಪೊಲೀಸರ ಅತಿಥಿಯಾಗಿದ್ದಾನೆ.

ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ

Edited By : Manjunath H D
PublicNext

PublicNext

03/02/2025 03:49 pm

Cinque Terre

22.14 K

Cinque Terre

0

ಸಂಬಂಧಿತ ಸುದ್ದಿ