ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕಳ್ಳತನ, ವಂಚನೆ ಪ್ರಕರಣ ಭೇದಿಸಿ 14 ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ವಿಜಯಪುರ ಪೊಲೀಸ್

ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದ ಮನೆ ಕಳ್ಳತನ ಹಾಗೂ ವಂಚನೆ ಪ್ರಕರಣ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ 14 ಜನ ಆರೋಪಿಗಳನ್ನ ಬಂಧಿಸಿ ಒಟ್ಟು, 67,79,500 ರೂ. (ಅರವತ್ತೇಳು ಲಕ್ಷ ಎಪ್ಪತ್ತರೊಂಬತ್ತು ಸಾವಿರದ ಐನೂರು ) ಮೊತ್ತದ ವಸ್ತುಗಳನ್ನ ಪಡಿಸಿಕೊಂಡು, ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು ಖಚಿತ ಮಾಹಿತಿಯನ್ನು ಕಲೆಹಾಕಿ ಕಾನೂನು ಸಂಘರ್ಷಕ್ಕೊಳಪಟ್ಟ ಒಬ್ಬ ಬಾಲಕ ಸೇರಿದಂತೆ ಒಟ್ಟು 14 ಜನ ಆರೋಪಿತರನ್ನು ದಸ್ತಗಿರಿ ಮಾಡಿ ವಿಜಯಪುರ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 12 ಪ್ರಕರಣಗಳಲ್ಲಿ 271 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 30,00,000 ನಗದು, ವಿವಿಧ ಕಂಪನಿಯ 04 ಮೋಟಾರ್ ಸೈಕಲ್ ಗಳು, ಒಂದು T&H 210 ಕಂಪನಿಯ ಹಿಟ್ಯಾಚ್ ಬ್ರೆಕರ್, ಒಂದು ಎಸಿ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾದ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ

Edited By : Suman K
Kshetra Samachara

Kshetra Samachara

06/01/2025 01:51 pm

Cinque Terre

5.58 K

Cinque Terre

0