ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಕೇವಲ 10 ಗಂಟೆಯಲ್ಲಿ ಪ್ರಕರಣ ಭೇದಿಸಿದ ಗಾಂಧಿಚೌಕ ಪೊಲೀಸರು

ವಿಜಯಪುರ : ಕೇವಲ 10 ಗಂಟೆಯಲ್ಲಿ ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣ ಭೇದಿಸುವಲ್ಲಿ

ಗಾಂಧಿಚೌಕ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ! ವಿಜಯಪುರ ನಗರದ ಗಣಪತಿ ಚೌಕ ಮೇಲೆ ತಡ ರಾತ್ರಿ ಕಲ್ಲು ಎಸೆಯುವ ಮೂಲಕ ಗಣಪತಿ ಚೌಕ್ ನ ಗ್ಲಾಸಗಳನ್ನ ಪುಡಿ ಪುಡಿ ಮಾಡಲಾಗಿತ್ತು, ಇನ್ನೂ ಘಟನೆ ನಡೆದ ಬೆನ್ನಲ್ಲೇ ಎಸ್ ಪಿ ಋಷಿಕೇಶ್ ಸೋನಾವಣೆ ಸಿಪಿಐ ಪ್ರದೀಪ ತಳಕೇರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನ ರಚಿಸಿ ಕಿಡಿಗೇಡಿಗಳ ಪತ್ತೆಗೆ ಬಲಿ ಬಿಸಿದ್ದರು.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಗಣಪತಿ ಚೌಕ ಹತ್ತಿರದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಕೃತ್ಯದ ವೇಳೆ ಬಳಸಿದ್ದ ಆಟೋ ನಂಬರ್ ಮೂಲಕ ಆರೋಪಿಗಳನ್ನ ಪತ್ತೆಮಾಡಲಾಗಿದ್ದು.

ಆರೋಪಿ ಸೊಹೇಲ್ ಜಮಾದಾರ್ (21)ನ್ನನ ವಶಕ್ಕೆ ಪಡೆಯಲಾಗಿದೆ, ಸದ್ಯ ಆರೋಪಿ ಸೊಹೇಲ್ ಸ್ನೇಹಿತ ಪರಾರಿಯಾಗಿದ್ದು ಆತನ ಬಂಧನಕ್ಕೂ ಗಾಂಧಿಚೌಕ ಪೊಲೀಸರು ಬಲೆ ಬೀಸಿದ್ದಾರೆ. ಖದೀಮರು ಕುಡಿದ ನಶೆಯಲ್ಲಿ ಕಲ್ಲು ತೂರಿ, ಸ್ಥಳದಲ್ಲಿದ್ದ ಹೋಮ್‌ಗಾರ್ಡ್ ಗೂ ಅವಾಚ್ಯವಾಗಿ ನಿಂದಿಸಿದ್ದರು

-ಮಂಜು ಕಲಾಲ ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Shivu K
PublicNext

PublicNext

04/10/2024 11:19 am

Cinque Terre

17.63 K

Cinque Terre

1